ಕೂಳೂರು ಸೇತುವೆ ರಿಪೇರಿಗೆ ಮುಹೂರ್ತ ಕೂಡಿ ಬರಲಿಲ್ಲವೇ

ಪಣಂಬೂರು ಕಡೆಯಿಂದ ಮಂಗಳೂರಿಗೆ ಹೋಗುವ ಕೂಳೂರಿನ ಹಳೆ ಸೇತುವೆ ಪ್ರವೇಶದ್ವಾರದಲ್ಲಿ ಸೇತುವೆ ದಂಡೆಗೆ ಕಳೆದ ವರ್ಷ ಎರಡ್ಮೂರು ಸಲ ವಾಹನ ಡಿಕ್ಕಿಯಾಗಿ ಸೇತುವೆ ದಂಡೆ ಒಡೆದು ವಾಹನ ಕೆಳಗೆ ಪಲ್ಟಿಯಾಗಿ ಬಿದ್ದು ಘಟನೆ ನಡೆದಿದ್ದರೂ ಇಷ್ಟರತನಕವೂ ಈ ಸೇತುವೆ ದಂಡೆ ಸರಿಪಡಿಸಿಲ್ಲ. ಇನ್ನೇನು ಕೆಲವೇ ದಿನದಲ್ಲಿ ಮಳೆಗಾಲ ಆರಂಭವಾಗುತ್ತದೆ. ಮಳೆಗಾಲದಲ್ಲಿ ಸೇತುವೆಯಲ್ಲಿ ನೀರು ತುಂಬಿ ತುಳುಕಿರುವಾಗ ಈ ಸೇತುವೆ ದಂಡೆ ರಿಪೇರಿ ಮಾಡದೇ ಹೀಗೆ ಬಿಟ್ಟಲ್ಲಿ ಒಂದಲ್ಲ ಒಂದು ದಿನ ಅಪಾಯ ಖಂಡಿತ. ಕಳೆದ ವರ್ಷ ಒಂದು ಸಲ ರಿಪೇರಿ ಮಾಡಿದ ದಂಡೆಗೆ ಮತ್ತೆ ವಾಹನ ಡಿಕ್ಕಿ ಹೊಡೆದು ದಂಡೆ ಸಂಪೂರ್ಣ ಕುಸಿದುಬಿದ್ದಿದೆ. ಅದರ ನಂತರ ರಿಪೇರಿ ಗೋಜಿಗೆ ಹೋಗಿಲ್ಲ. ಮಳೆಗಾಲದೊಳಗೆ ಈ ಸೇತುವೆ ದಂಡೆ ರಿಪೇರಿ ಮಾಡಿ ಸಂಭವನೀಯ ಅವಘಡದಿಂದ ಜೀವಹಾನಿ ತಪ್ಪಿಸಬೇಕಿದೆ

  • ವೆಂಕಟೇಶ್ ಪೂಜಾರಿ  ತಣ್ಣೀರುಬಾವಿ