ಸಂಸದ ನಳಿನರೇ ಹೊನ್ನಕಟ್ಟೆ ಹೆದ್ದಾರಿ ರಸ್ತೆ ಪರಿವರ್ತನೆ ಎಂದು

ನಾನು ತುರ್ತು ಕೆಲಸದ ನಿಮಿತ್ತ ಮಂಗಳೂರಿನಿಂದ ಉಡುಪಿಗೆ ಹೋದೆ. ಆದರೆ ಹೆದ್ದಾರಿ ರಸ್ತೆ ಮಂಗಳೂರಿನಿಂದ ಸುರತ್ಕಲ್-ಹೊಸಬೆಟ್ಟುತನಕ ಕೆಟ್ಟು ಹೋದಷ್ಟು ಉಡುಪಿಯಲ್ಲಿಲ್ಲ ಬರೇ ಪಡುಬಿದ್ರೆಯಿಂದ ತೆಂಕ ಎರ್ಮಾಳುತನಕ ಹಳೇ ರಸ್ತೆ ಒಂದಿಷ್ಟು ಹೊಂಡ ಗುಂಡಿ ಬಿಟ್ಟರೆ ಅಲ್ಲಿಂದ ಮುಂದೆ ಉಡುಪಿತನಕ ಹೆದ್ದಾರಿ ಉತ್ತಮವಾಗಿದೆ ಮಂಗಳೂರಿನಿಂದ ಬರುವಾಗ ಕೂಳೂರು ಪಾಸಾಗಿ ಕುದುರೆಮುಖ ಪಣಂಬೂರು ಬೈಕಂಪಾಡಿ ಜೋಕಟ್ಟೆ ಕ್ರಾಸ್  ಹೊನ್ನಕಟ್ಟೆ ಜಂಕ್ಷನುಗಳ ಪರಿಸ್ಥಿತಿ ನೋಡುವಾಗ ಹೀಗೂ ಉಂಟೇ ಅನ್ನಿಸಿತ್ತು ಕೇಬಲ್ ಹಾಕಲು ಹೊಂಡ ತೆಗೆದಂತೆ ಅಷ್ಟೊಂದು ಬೃಹದಾಕಾರದ ಹೊಂಡ ಬಿದ್ದಲ್ಲಿಂದ ವೇಗದೂತ ಬಸ್ಸುಗಳು ಎದ್ದು ಬಿದ್ದು ಹೋಗುವಾಗ ಬಸ್ಸಿನಲ್ಲಿ ಕುಳಿತವರ ಬೆನ್ನು ಮೂಳೆ ಏನಾದೀತು ಹೆದ್ದಾರಿ ರಸ್ತೆ ಇಷ್ಟೊಂದು ಕೆಟ್ಟಿದೆಯಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲೀ ಮಂಗಳೂರಿನ ಸಂಸದ ನಳಿನರಾಗಲೀ ಗಮನಿಸಿಲ್ಲವೇ ನಿಮ್ಮದೇ ಮೋದಿ ನೇತೃತ್ವದ ಕೇಂದ್ರ ಸರಕಾರ ಆಳ್ವಿಕೆಯಲ್ಲಿ ಇರುವಾಗ ಹೆದ್ದಾರಿ ಇಷ್ಟೊಂದು ಕುಲಗೆಟ್ಟಿದ್ದರೂ ಸಂಬಂಧಪಟ್ಟವರ ಗಮನಕ್ಕೆ ತರಲು ಹಿಂಜರಿಕೆ ಯಾಕೆ ಮುಂದೆ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸುವುದಿಲ್ಲವೇ ಅದರೆಡೆಯಲ್ಲಿ ಪರಿವರ್ತನೆಯಾತ್ರೆಗೆ ಶುಭಾಶಯ ಕೋರುವ ಬ್ಯಾನರ್ ಅಲ್ಲಲ್ಲಿ ನಳಿನ್ ಕುಮಾರ್ ಚಿತ್ರ ರಾರಾಜಿಸುತ್ತಿದೆ. ಇದನ್ನೆಲ್ಲ ಗಮನಿಸುವಾಗ ಪರಿವರ್ತನಾ ಯಾತ್ರೆ ಸಮಾವೇಶವೇ ಮುಖ್ಯವಾಯಿತೇ ಹೆದ್ದಾರಿ ರಸ್ತೆ ಮೊದಲು ಪರಿವರ್ತನೆಯಾಗಬೇಕು ರಾತ್ರಿ ವೇಳೆ ಕತ್ತಲಲ್ಲಿ ಹೊಂಡ ಗಮನಿಸದೇ ಅಮಾಯಕರ ಜೀವ ಹೋಗುತ್ತಿದ್ದರೂ ತಮಗೆ ಯಾಕೆ ಗೊತ್ತಾಗುತ್ತಿಲ್ಲ ಹಿಂದೂತ್ವದ ನೆಲೆಯಲ್ಲಿ ಕಾರ್ಯಕರ್ತರು ತನ್ನನ್ನು ಪ್ರತೀ ಬಾರಿಯೂ ದಡ ಹತ್ತಿಸುತ್ತಾರೆಂಬ ಭಂಡ ಧೈರ್ಯವೇ ಮಂಗಳೂರಿನ ಪ್ರಥಮ ಬಿಜೆಪಿ ಸಂಸದ ಧನಂಜಯ ಕುಮಾರ್ ಪರಿಸ್ಥಿತಿ ಏನಾಗಿದೆ ಕೆಲಸ ಮಾಡದಿದ್ದರೆ ಕಾರ್ಯಕರ್ತರೇ ಮನೆಗೆ ಕಳಿಸುತ್ತಾರೆ ಕೇಂದ್ರದಲ್ಲಿ ತಮ್ಮದೇ ಸರಕಾರ ಆಡಳಿತ ನಡೆಸುತ್ತಿರುವಾಗ ಕೆಲಸ ಮಾಡದವರು ಇನ್ನು ಕೇಂದ್ರದಲ್ಲಿ ಯುಪಿಎ ಸರಕಾರ ಬಂದರೆ ತಾವು ಕೆಲಸ ಮಾಡಲು ಸಾಧ್ಯನಾ ಒಟ್ಟಿನಲ್ಲಿ ಹೆದ್ದಾರಿ ಅವಸ್ಥೆ ಗಮನಿಸಿದವರು ಪರಿವರ್ತನಾ ಯಾತ್ರೆ ಟೀಕಿಸದೇ ಇರಲಾರರು

  • ನಿರಂಜನ್ ಸುವರ್ಣ  ನಂತೂರು ಮಂಗಳೂರು