ಹೊನ್ನಕಟ್ಟೆ ಜಂಕ್ಷನ್ ಗುಂಡಿ ಮುಚ್ಚಲು ಇನ್ನೆಷ್ಟು ದಿನಬೇಕು

ಸಾಂದರ್ಭಿಕ ಚಿತ್ರ

ರಾಷ್ಟ್ರೀಯ ಹೆದ್ದಾರಿ 66 ಹೊನ್ನಕಟ್ಟೆ ಜಂಕ್ಷನ್ನಿನಲ್ಲಿ ಗುಂಡಿ ಬಿದ್ದ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಎರಡೆರಡು ಪ್ರತಿಭಟನೆ ನಡೆದು ವಾರ ಎರಡು ಕಳೆದರೂ ಹೆದ್ದಾರಿ ಗುಂಡಿ ಮುಚ್ಚುವ ಸೂಚನೆ ಕಾಣುತ್ತಿಲ್ಲ ಗುಂಡಿ ಬಿದ್ದ ಸ್ಥಳದಲ್ಲಿ ವಾಹನಗಳು ಎದ್ದು ಬಿದ್ದು ಹೋಗುವ ಪರಿಯನ್ನು ನೋಡಿದರೆ ಇದು ರಾಷ್ಟ್ರೀಯ ಹೆದ್ದಾರಿ 66 ರಸ್ತೆ ಎಂದು ಹೇಳಲು ನಾಚಿಕೆ ಪಡಬೇಕು ಒಂದು ಕಡೆ ವಿಪರೀತ ಧೂಳು ಇನ್ನೊಂದು ಕಡೆ ಜರ್ಝರಿತಗೊಂಡ ರಸ್ತೆಗೆ ಯಾವಾಗ ಎಂದು ಮುಕ್ತಿ ಸಿಗುತ್ತದೆಯೋ ವಾಹನಿಗರು ನಿತ್ಯವೂ ಓಡಾಡುವಾಗ ಹಿಡಿಶಾಪ ಹಾಕಿಯೇ ಹೋಗುತ್ತಾರಾದರೂ ನಮ್ಮನ್ನಾಳುವ ಜನಪ್ರತಿನಿಧಿಗಳು ಹೆದ್ದಾರಿ ಅಧಿಕಾರಿಗಳು ಕಿವುಡರಂತೆ ವರ್ತಿಸುತ್ತಿರುವುದು ನಾಚಿಕೆಗೇಡು ಅಪಾಯಕಾರಿ ಜಂಕ್ಷನ್ನಿನಲ್ಲಿ ಸಿಗ್ನಲ್ ಅಳವಡಿಕೆ ಸರಿಯಾಗಿದ್ದರೂ ಇಷ್ಟೊಂದು ರಸ್ತೆ ಕೆಟ್ಟು ಹೋಗಿರುವಾಗ ಇಲ್ಲಿ ಸಿಗ್ನಲ್ ಯಾಕೆ ಅಗತ್ಯವಿತ್ತ ರಸ್ತೆ ಕೆಟ್ಟು ಹೋಗಿ ಸಿಗ್ನಲ್ ಬಿದ್ದರೆ ಒಂದು ಮಿನಿಟ್ಟಿನಲ್ಲಿ ಹೊಸಬೆಟ್ಟುತನಕ ವಾಹನಗಳು ಸಾಲಾಗಿ ನಿಂತರೇ ಒಂದು ಮಿನಿಟ್ ಅರ್ಧ ಮಿನಿಟ್ ಮಾತ್ರ ಗ್ಯಾಪಿನಲ್ಲಿ ಬರುವ ವೇಗದೂತ ಬಸ್ಸಿನವರ ಅವಸ್ಥೆ ಹೇಗಿರಬಹುದು ಸಿಗ್ನಲ್ ಅಳವಡಿಸಿರುವ ಇಲ್ಲಿನ ಜಂಕ್ಷನ್ ರಸ್ತೆ ಹೇಗೆ ಇರಬೇಕಿತ್ತು ಇದನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆ ಎಂದು ಹೇಳಲು ನಾಚಿಕೆಯಾಗಲ್ಲವೇ

  • ಗುರುಪ್ರಸಾದ್  ಹೊಸಬೆಟ್ಟು ಸುರತ್ಕಲ್