ಸರಕಾರಿ ಶಾಲೆ ಪ್ರಗತಿ ಕಾಣುವುದೆಂದು

ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಬರೇ ಮೊಟ್ಟೆ, ಹಾಲಿನಿಂದ ಸರಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿಲ್ಲ. ಸರಕಾರ ಪ್ರತೀ ವರ್ಷ ಸರಕಾರಿ ಶಾಲೆಗಳಲ್ಲಿ ಅತ್ಯುನ್ನತ ಶ್ರೇಣಿಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ಗುರುತಿಸಿ ಆ ಶಾಲೆ ಮತ್ತು ವಿದ್ಯಾರ್ಥಿಗಳ ಭಾವಚಿತ್ರವನ್ನು ಶಿಕ್ಷಣ ಇಲಾಖೆ ಮಾಧ್ಯಮಗಳ ಮೂಲಕ ಪ್ರಕಟಿಸಬೇಕು. ಸರಕಾರಿ ಶಾಲೆಗಳಿಗೆ ಅತ್ಯುತ್ತಮ ಅಂಕಗಳು ಬಂದರೆ ಅದನ್ನು ಜಾಹೀರಾತುಗಳ ಮೂಲಕ ಘೋಷಿಸಬೇಕು. ಜೊತೆಗೆ, ಮುಖ್ಯವಾಗಿ ಸರಕಾರದ ಸಂಬಳದಿಂದ ಜೀವನ ಸಾಗಿಸುವ ಶಿಕ್ಷಕರು ಶ್ರದ್ಧ್ದೆ ಮತ್ತು ನಿಯತ್ತಿನಿಂದ ಕಾರ್ಯನಿರ್ವಹಿಸಬೇಕು. ಸರಕಾರಿ ಶಿಕ್ಷಕರಿಗೆ ವಹಿಸಿರುವ ಇತರ ಸರಕಾರಿ ಕೆಲಸಗಳ ಹೊರೆಯನ್ನು ಕಡಿಮೆ ಮಾಡಿ ಹೆಚ್ಚಿನ ಸಮಯವನ್ನು ಶಿಕ್ಷಕರು ಶಾಲೆಗಳಲ್ಲಿ ಕಳೆಯುವಂತೆ ಮಾಡಬೇಕು. ಸರಿಯಾಗಿ ಕಾರ್ಯನಿರ್ವಹಿಸದÀವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಸರಕಾರಿ ಶಾಲೆಗಳು ಪ್ರಗತಿ ಕಾಣಬಹುದೇನೋ

  • ನಿರಂಜನ್ ಪೂಜಾರಿ  ಉದ್ಯಾವರ