ಜಂಕ್ಷನ್ ಬಸ್ ನಿಲ್ದಾಣ ಸ್ಥಳಾಂತರ ಯಾವಾಗ

ನಗರದಲ್ಲಿ ವಾಹನ ದಟ್ಟಣೆ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ  ಎಲ್ಲೆಲ್ಲಿಯೂ ದೊಡ್ಡ ದೊಡ್ಡ ಡಸ್ಟರ್  ಫೋರ್ಡ್ ಟೊಯೋಟಾ ಹಾಗೂ ಇತರ ಕಂಪೆನಿಗಳ ಕಾರುಗಳ ಅಡ್ಡಾದಿಡ್ಡಿ ಪಾರ್ಕಿಂಗ್ ಸಾಕಾಗದಕ್ಕೆ ನಮ್ಮ ರಸ್ತೆ ಜಂಕ್ಷನ್ ವೃತ್ತಗಳ ಪಕ್ಕವೇ ಬಸ್ ನಿಲ್ದಾಣಗಳು ಕಾರ್ಯಾಚರಿಸುತ್ತಿದ್ದು ಇತರ ವಾಹನಗಳು ಸುಸೂತ್ರವಾಗಿ ಸಂಚರಿಸಲು ತೊಂದರೆಯಾಗಿದೆ
ನಗರದ ಪಿವಿಎಸ್  ಬಂಟ್ಸ್ ಹಾಸ್ಟೆಲ್  ಕರಾವಳಿ ವೃತ್ತ  ಬೆಂದೂರ್‍ವೆಲ್ ವೃತ್ತ  ಬಲ್ಮಠ  ಪೆಟ್ರೋಲ್ ಬಂಕ್ ಪಕ್ಕ  ಇವೆಲ್ಲ ಜಂಕ್ಷನ್ನುಗಳಲ್ಲಿ ಬಸ್ ನಿಲ್ದಾಣಗಳಿದ್ದು ಸಾರ್ವಜನಿಕರಿಗೆ ತುಂಬಾ ಅನಾನುಕೂಲ  ತೊಂದರೆಯನ್ನೊಡ್ಡುತ್ತಿದೆ  ಜ್ಯೋತಿ ಸರ್ಕಲ್  ವುಡ್ ಲ್ಯಾಂಡ್ಸ್ ಪಕ್ಕದ ಬಸ್ ಸ್ಟ್ಯಾಂಡ್ ಸಹ ಗೊಂದಲದ ಬೀಡಾಗಿ ಪರಿಣಮಿಸಿದೆ  ಇಲ್ಲಿ ಅಗಲ ರಸ್ತೆ ಕಿರಿದಾಗಿದ್ದರೂ ನೂರಾರು ಬಸ್ಸುಗಳ ತಂಗುದಾಣ  ಇತರ ವಾಹನಗಳಿಗೆ ಸಂಚರಿಸಲು ಉಪದ್ರ ಅಡೆತಡೆ
ಇಂತಹ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಬಸ್ ನಿಲ್ದಾಣಗಳನ್ನು ಹಂತ ಹಂತವಾಗಿ ಸ್ಥಳಾಂತರ ಮಾಡುವ ಬಗ್ಗೆ ಅಂದಿನ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ತಳೆದ ನಿರ್ಧಾರವೇನಾಯಿತು   ಅವರು ನಿರ್ಗಮಿಸಿ ಹಲವು ತಿಂಗಳಾದರೂ ಜಂಕ್ಷನ್ನುಗಳಲ್ಲಿನ ಬಸ್ ನಿಲ್ದಾಣಗಳನ್ನು ಸ್ಥಳಾಂತರ ಮಾಡಲು ಈಗಿನ ಜಿಲ್ಲಾಧಿಕಾರಿ  ದ ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಲಿ ಕ್ರಮ ತೆಗೆದುಕೊಂಡಿಲ್ಲ  ರಸ್ತೆ ಸುರಕ್ಷತಾ ಸಮಿತಿ ಏನು ಮಾಡುತ್ತಿದೆ   ಡೀಸಿಯವರು ತೆಗೆದುಕೊಂಡ ನಿರ್ಧಾರಕ್ಕೆ ಫಾಲೋ ಅಪ್ ಆ್ಯಕ್ಷನ್ ಯಾಕಿಲ್ಲ

  • ಜೆ ಎಫ್ ಡಿಸೋಜ  ಅತ್ತಾವರ