ಸತ್ಯನಾರಾಯಣ ಅಯ್ಯರ್ ರಿಗ್ರೆಟ್ ಅಯ್ಯರ್ ಆದ ರೋಚಕ ಕಥೆ

ಈ ವ್ಯಕ್ತಿಯ ಹೆಸರು ಸತ್ಯನಾರಾಯಣ ಅಯ್ಯರ್. ಅವರ ತಂದೆ ತಾಯಿ ಇಟ್ಟ ಹೆಸರು ಅದು. ಆದರೆ ಅವರು ತಮ್ಮ ಹೆಸರನ್ನು ರಿಗ್ರೆಟ್ ಅಯ್ಯರ್ ಎಂದು ಬದಲಾಯಿಸಿದ್ದಾರೆ. ಬೆಂಗಳೂರು ನಿವಾಸಿಯಾದ ಅವರೇಕೆ ಹೀಗೆ ಮಾಡಿದರೆಂಬ ಪ್ರಶ್ನೆಗೆ ಉತ್ತರ ಬಹಳ ಸ್ವಾರಸ್ಯಕರ.

  • ಗೀತಾ ಪಾಂಡೆ

ಸತ್ಯನಾರಾಯಣ ಅಯ್ಯರ್ ಅವರೊಬ್ಬ ಬಹುಮುಖ ಪ್ರತಿಭೆಯ ವ್ಯಕ್ತಿತ್ವ, ಹಾಗೆಂದು ಅವರೇ ಹೇಳಿಕೊಳ್ಳುತ್ತಾರೆ. ತಾನೊಬ್ಬ ಲೇಖಕ, ಪ್ರಕಾಶಕ, ಛಾಯಾಗ್ರಾಹಕ, ಪತ್ರಕರ್ತ, ವ್ಯಂಗ್ಯಚಿತ್ರಕಾರ ಇತ್ಯಾದಿ ಇತ್ಯಾದಿ ಎಂದು ಅವರು ತಮ್ಮನ್ನು ವರ್ಣಿಸುತ್ತಾರೆ.

ಬೆಂಗಳೂರು ನಿವಾಸಿಯಾಗಿರುವ ಅರ್ವತ್ತೇಳು ವರ್ಷದ ಅಯ್ಯರ್ ಅವರಿಗೆ ಬಾಲ್ಯದಿಂದಲೂ ಪತ್ರಕರ್ತನಾಗಬೇಕೆಂಬ ಕನಸಿತ್ತು. ಅವರ ಈ ಕನಸೇ ಅವರು ಅಂತಿಮವಾಗಿ ತಮ್ಮ ಹೆಸರನ್ನೇ ಬದಲಾಯಿಸುವಂತೆ ಮಾಡಿದೆ.

ಬರೆಯಬೇಕೆಂಬ ಹುಮ್ಮಸ್ಸು ಅವರಿಗೆ ಕಾಲೇಜಿನ ದಿನಗಳಿಂದಲೇ ಆರಂಭವಾಗಿತ್ತು. ಎಪ್ಪತ್ತರ ದಶಕದಲ್ಲಿ ಅವರು ಒಂದು ಲೇಖನವನ್ನು ಬರೆದಿದ್ದರು. “ಹೂ ಆ್ಯಮ್ ಐ?” ಎಂಬ ಅವರ ಈ ಲೇಖನ ಅವರ ಕಾಲೇಜು ಮ್ಯಾಗಜೀನಿನಲ್ಲಿ ಪ್ರಕಟವಾಯಿತು. ತಾನೊಬ್ಬ ಪತ್ರಕರ್ತನಾಗಲು ಎಲ್ಲಾ ಅರ್ಹತೆ ಹೊಂದಿದ್ದೇನೆಂಬ ಭಾವನೆ ಅವರಲ್ಲಿ ಬೆಳೆಯಲು ಇದೊಂದೇ ಸಾಕಾಯಿತು.

ಆರಂಭದಲ್ಲಿ ಅವರು `ಲೆಟರ್ಸ್ ಟು ಎಡಿಟರ್”(ಸಂಪಾದಕರಿಗೆ ಪತ್ರ) ಬರೆಯಲಾರಂಭಿಸಿದರು. ಹಲವು ಪತ್ರಗಳು ಪ್ರಕಟಗೊಂಡಾಗ ಅವರ ಮಹತ್ವಾಕಾಂಕ್ಷೆ ಗರಿಗೆದರಿತ್ತು. ಆಗಿನ ಜನಪ್ರಿಯ ಸಂಜೆ ಪತ್ರಿಕೆ “ಜನವಾಣ’ಗೆ ಒಂದು ಲೇಖನ ಬರೆದು ಕಳುಹಿಸಿದರು. ಅದು ವಿಜಯಪುರ ಪಟ್ಟಣದ ಇತಿಹಾಸದ ಕುರಿತ ಲೇಖನವಾಗಿತ್ತು.

ಆದರೆ ಕೆಲ ದಿನಗಳ ನಂತರ ಒಂದು `ವಿಷಾದ ಪತ್ರ’ (ರಿಗ್ರೆಟ್ ಲೆಟರ್) ಅವರ ಕೈಸೇರಿತು. ತಮ್ಮ ಪತ್ರಿಕೆಯಲ್ಲಿ ಅವರು ತೋರಿಸಿದ ಆಸಕ್ತಿಯನ್ನು ಶ್ಲಾಘಿಸುತ್ತಾ ಅವರ ಲೇಖನವನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ವಿಷಾದ ಸೂಚಿಸಿ ಅದರ ಸಂಪಾದಕರು ಪತ್ರ ಬರೆದಿದ್ದರು.

“ನನಗೆ ನಿರಾಸೆಯಾಗಿತ್ತು, ಆದರೆ ನನ್ನ ಉತ್ಸಾಹ ಕುಂದಲಿಲ್ಲ” ಎನ್ನುತ್ತಾರೆ ಅಯ್ಯರ್. ಮುಂದಿನ ಕೆಲ ವರ್ಷಗಳಲ್ಲಿ ಅವರು ವಿವಿಧ ಕನ್ನಡ ಮತ್ತು ಆಂಗ್ಲ ಪತ್ರಿಕೆಗಳಿಗೆ ಸಂಪಾದಕರಿಗೆ ಪತ್ರ, ಲೇಖನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಕವನಗಳನ್ನು ಕಳುಹಿಸುತ್ತಾ ಹೋದರು. ದೇವಸ್ಥಾನಗಳ ಬಗ್ಗೆ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹಾಗೂ ಇತರ ಸುದ್ದಿಗಳ ಬಗ್ಗೆ ಅವರು ಬರೆದರು. ಅವರ ಲೆಟರ್ಸ್ ಟು ಎಡಿಟರ್ ಸಾರಿಗೆ ಸಮಸ್ಯೆ, ತ್ಯಾಜ್ಯ ಸಮಸ್ಯೆ ಮತ್ತಿತರ ಸಮಸ್ಯೆಗಳತ್ತ ಬೆಳಕು ಚೆಲ್ಲಿದ್ದವು. ಅವರ ಕೆಲ ಬರಹಗಳು ಪ್ರಕಟಗೊಂಡರೂ ಹೆಚ್ಚಿನವು ತಿರಸ್ಕøತಗೊಂಡಿದ್ದವು. ಹೀಗೆ ತಿರಸ್ಕøತಗೊಂಡು ಅವರಿಗೆ ಪತ್ರಿಕೆಗಳಿಂದ ಬಂದ ವಿಷಾದ ಪತ್ರಗಳೆಲ್ಲವನ್ನೂ ಒಟ್ಟುಗೂಡಿಸಿದ್ದಾರೆ ಅಯ್ಯರ್. ಅವರ ಬಳಿ ಒಟ್ಟು 375 ರಿಗ್ರೆಟ್ ಲೆಟರುಗಳ ಸಂಗ್ರಹವಿದೆ. ಭಾರತದಿಂದ ಮಾತ್ರವಲ್ಲ ಹೊರದೇಶಗಳಿಂದಲೂ ಬಂದ ವಿಷಾದ ಪತ್ರಗಳು ಅವರಲ್ಲಿವೆ.

“ನನ್ನ ಬರಹಗಳೇಕೆ ತಿರಸ್ಕøತಗೊಳ್ಳುತ್ತಿದ್ದವು ಎಂಬುದು ನನಗೇ ತಿಳಿದಿರಲಿಲ್ಲ. ನನ್ನ ಬರವಣಿಗೆಯಲ್ಲೇನು ಕೊರತೆಯಿದೆ ಎಂದು ನಾನು ಯೋಚಿಸಲಾರಂಭಿಸಿದೆ. ಆದರೆ ಬರಹಗಳನ್ನು ತಿರಸ್ಕರಿಸುವಾಗ ಅದಕ್ಕೆ ಸಂಪಾದಕರು ಕಾರಣ ಹೇಳುವ ಪ್ರಯತ್ನವನ್ನೇ ನಡೆಸಿಲ್ಲ” ಎನ್ನುತ್ತಾರೆ ಅಯ್ಯರ್.

ಅಯ್ಯರ್ ಅವರಿಗೆ `ರಿಗ್ರೆಟ್ ಅಯ್ಯರ್’ ಎಂಬ ಅನ್ವರ್ಥ ನಾಮ ಬರಲು ಕಾರಣರಾದ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಹೀಗೆ ಹೇಳುತ್ತಾರೆ- “ಅವರು ಸುದ್ದಿಗಳನ್ನು ಸಂಗ್ರಹಿಸುವಲ್ಲಿ ನಿಪುಣರಾಗಿದ್ದರು. ಉತ್ತಮ ಲೇಖನ ವಿಷಯಗಳೂ ಅವರಲ್ಲಿದ್ದವು. ಆದರೆ ಅವುಗಳನ್ನು ಓದುಗರ ಮನತಟ್ಟುವಂತೆ ಬರೆಯುವ ಸಾಮಥ್ರ್ಯ ಅವರಿಗಿರಲಿಲ್ಲ.” (ಬಿಬಿಸಿ)

 

LEAVE A REPLY