ಕೃಷ್ಣನ ಜನ್ಮದಿನ ಯಾವುದು ಸರಿ

ಈ ವರ್ಷ ಆಗಸ್ಟ್ ತಿಂಗಳಲ್ಲಿ ಹಲವೆಡೆ ಕೃಷ್ಣನ ಜನ್ಮ ದಿನೋತ್ಸವದ ಆಚರಣೆ ನಡೆದಿದೆ ಇನ್ನು ಕೆಲವೆಡೆ ಈ ತಿಂಗಳು ಸೆಪ್ಟೆಂಬರಿನಲ್ಲಿ ನಡೆಯಲಿದೆ ಇದೇಕೆ ಹೀಗೆ ಕೃಷ್ಣನ ಜನ್ಮದಿನ ತಿಂಗಳ ಅಂತರದಲ್ಲಿ ಎರಡು ಬಾರಿ ಬರುವುದು ಹೇಗೆ ಚಾಂದ್ರಮಾನ ಮತ್ತು ಸೌರಮಾನ ಎಂಬ ಎರಡು ಪದ್ಧತಿಗಳ ಬಳಕೆ ಇದಕ್ಕೆ ಕಾರಣವೇ ಹಾಗಿದ್ದರೆ ಪ್ರತಿ ಹಬ್ಬವೂ ಯುಗಾದಿಯ ರೀತಿಯಲ್ಲಿ ಎರಡೆರಡು ಆಗಬೇಡವೇ ಹಿಂದೂ ಹಬ್ಬದಾಚರಣೆಗೆ ಒಂದು ನಿರ್ದಿಷ್ಟ ಮೂಲಸೂತ್ರ ಬೇಡವೇ ಆಷಾಢ ಮಾಸದಲ್ಲಿ ಹಬ್ಬವಿಲ್ಲವೆಂದೋ ಅಧಿಕ ಮಾಸವೆಂದೋ ಮೌಢ್ಯವೆಂದೋ ಬೇರೆ ಬೇರೆ ಕಾರಣಗಳನ್ನು ಹೇಳುವುದು ಕೇಳಿ ಬರುತ್ತಿದೆ ಜನ್ಮ ದಿನಾಚರಣೆಗಳು ಆ ಕಾರಣದಿಂದ ಮುಂದೂಡಲ್ಪಡುವುದು ಸರಿಯೇ ಒಂದು ಊರಲ್ಲಿ ತಿಂಗಳಂತರದಲ್ಲಿ ಒಂದೇ ಹಬ್ಬವು ಎರಡು ಬಾರಿ ಆಚರಿಸಲ್ಪಡುವ ವಿದ್ಯಮಾನ ಏಕೋ ಅಷ್ಟೊಂದು ಅರಗಿಸಿಕೊಳ್ಳಲಾಗದ ವಿಚಾರ ಇವೆಲ್ಲ ನಮ್ಮ ಹಿಂದೂ ಸಂಸ್ಕøತಿಯ ವೈವಿಧ್ಯ ವೈಶಿಷ್ಟ ಎಂದು ಬಡಾಯಿ ಬಿಡುವವರಿಗೇನೂ ಕಮ್ಮಿ ಇಲ್ಲ ಆದರೆ ಜನ್ಮ ದಿನಾಚರಣೆಗಳು ಎರಡು ಬಾರಿಯೂ ನಡೆಯಬಹುದು ಹೆಚ್ಚೂ ಆಗಬಹುದು ಎಂದು ಶಾಸ್ತ್ರ ಬಲ್ಲವರಂತೆ ಬುರುಡೆ ಬಿಡುವವರಿಂದಾಗಿ ಈ ಧರ್ಮದಲ್ಲಿ ಯಾವುದೇ ಖಚಿತತೆ ಇಲ್ಲವೆಂಬಂತಹ ಭಾವನೆ ಮೂಡಿ ಬರುತ್ತದೆ ಎರಡೆರಡು ಬಾರಿ ಒಂದೇ ಹಬ್ಬ ಆಚರಣೆ ಮಾಡುವುದು ಒಂದಿಷ್ಟು ಗೊಂದಲಕಾರಿಯಾಗಿರುವುದಂತೂ ಸತ್ಯ

  • ಎಂ ಕೆ  ಮಂಗಳೂರು