ಧನ್ಯಶ್ರೀ ಆತ್ಮಹತ್ಯೆಗೆ ಕೋಮು ಸಂಘಟನೆ ವಾಟ್ಸಪ್ ಸಂದೇಶ ಕಾರಣ : ಪೊಲೀಸ್

ನಮ್ಮ ಪ್ರತಿನಿಧಿ ವರದಿ

ಚಿಕ್ಕಮಗಳೂರು : ಧನ್ಯಶ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಪೊಲೀಸರು ಕಳೆದ ಶನಿವಾರ ಉತ್ತೇಜನಕಾರಿ ಸಂದೇಶ ರವಾನಿಸಿರುವ ಮೂಡಿಗೆರೆಯ ವಾಟ್ಸಪ್ ಬಳಕೆದಾರರ ವಿರುದ್ಧ ಕ್ರಮ ಜರುಗಿಸಲು ನಿರ್ಧರಿಸಿರುವುದರಿಂದ ಈ ಪ್ರಕರಣಕ್ಕೆ ಹೊಸ ತಿರುವು ಬಂದಿದೆ.

ಹಿಂದೂ ಯುವತಿಯರು ಇತರ ಧರ್ಮಗಳ ಯುವಕರೊಂದಿಗೆ ಮಾತುಕತೆ ನಡೆಸಬಾರದೆಂಬ ವಾಟ್ಸಪ್ ಸಂದೇಶ ಜಿಲ್ಲೆಯಲ್ಲಿ ವ್ಯಾಪಕ ಹರಡಿದೆ. ಬಿಕಾಂ ಓದುತ್ತಿರುವ ಧನ್ಯಶ್ರೀ (20) ಜನವರಿ 6ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.

“ಧನ್ಯಶ್ರೀ ಸಾವನ್ನಪ್ಪಿದ ದಿನದಂದೇ ಪ್ರಸಾರಗೊಂಡಿದ್ದ ವಾಟ್ಸಪ್ ಸಂದೇಶಗಳ ಪರಿಶೀಲನೆ ನಡೆಯುತ್ತಿದೆ. ಇದು ಮೂಡಿಗೆರೆ ಬಜರಂಗ ದಳದಿಂದ ಈ ಸಂದೇಶ ಹೊರಡಿರುತ್ತದೆ. ಇಂತಹ ಸಂದೇಹ ಪರಸ್ಪರ ಹಂಚಿಕೊಳ್ಳದಂತೆ ಜನರಿಗೆ ಸಲಹೆ ನೀಡಿದ್ದೇವೆ” ಎಂದು ಪೊಲೀಸ್ ಇಲಾಖೆ ಹೇಳಿದೆ.

“ಸಾಮಾಜಿಕ ಜಾಲತಾಣದಲ್ಲಿ ಇಂತಹ ಉತ್ತೇಜನಕಾರಿ (ಅಪಾಯಕಾರಿ) ಸಂದೇಶ ರವಾನಿಸುವುದು ಅಪರಾಧ. ಈ ಸಂದೇಶ ರವಾನಿಸಿಕೊಂಡವರ ವಿರುದ್ಧ ನಾವು ಕ್ರಮ ಜರುಗಿಸಲಿದ್ದೇವೆ” ಎಂದು ಚಿಕ್ಕಮಗಳೂರು ಎಸ್ಪಿ  ತಿಳಿಸಿದರು.

ತಾನು ಪುತ್ರಿಯ ಮೊಬೈಲ್ ಫೋನ್ ಸ್ಥಗಿತಗೊಳಿಸಿದ ಬಳಿಕ ಆಕೆ ಮಾನಸಿಕವಾಗಿ ವಿಚಲಿತವಾಗಿದ್ದಳು ಎಂದು ಪೊಲೀಸ್ ವಿಚಾರಣೆ ವೇಳೆ ಧನ್ಯಶ್ರೀ ತಂದೆ ಯಾದವ್ ಸುವರ್ಣ ಹೇಳಿದ್ದಾರೆ.

ಸ್ಥಳೀಯ ಗುಂಪಿಂದ

ಎರಡು ಬಾರಿ ಭೇಟಿ

ಧನ್ಯಶ್ರೀ ಮನೆಗೆ ಸ್ಥಳೀಯ ಗುಂಪೊಂದು ಎರಡು ಬಾರಿ ಭೇಟಿ ನೀಡಿದೆ. ಈ ಕೇಸಿನಲ್ಲಿ ಶಾಮೀಲಾಗಿರುವ ಎಲ್ಲರನ್ನು ಬಂಧಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದ್ದಾರೆ. “ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ್ದ ಆ ಗುಂಪು ಪಾಲಕರಿಗೆ ಗದರಿಸಿತ್ತು. ಮತ್ತೊಂದು ಬಾರಿ ಭೇಟಿ ನೀಡಿದ್ದ ಇದೇ ಗುಂಪು, ಆಕೆಗೆ ಅನ್ಯ ಧರ್ಮಿಯ ಯುವಕರೊಂದಿಗೆ ಗೆಳೆತನವಿತ್ತು ಎಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಅನಿಲನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ.

 

LEAVE A REPLY