ತಾನು ನಂಬರ್ ಒನ್ ಸಂಸದ ಎನ್ನುವ ನಳಿನರಿಗೇನಾಗಿದೆ

ಮಂಗಳೂರು ಸಂಸದ ನಳಿನ್ ಕಟೀಲ್ ಸಾರ್ವಜನಿಕವಾಗಿ ಪೊಲೀಸ್ ಸ್ಟೇಶನ್ ಎದುರು ನಿಂತು ಕಾರ್ತಿಕ್ ರಾಜ್ ಹಂತಕರನ್ನು 10 ದಿನದಲ್ಲಿ ಬಂಧಿಸದೇ ಇದ್ದಲ್ಲಿ ದ ಕ ಜಿಲ್ಲೆಗೆ ಬೆಂಕಿ ಕೊಡುವುದಾಗಿ ಬೆದರಿಕೆ ಹಾಕಿದ್ದು  ನಂಬರ್ ಒನ್ ಸಂಸದ ಎಂದು ಬೂಟಾಟಿಕೆ ಪ್ರದರ್ಶಿಸುತ್ತಿರುವ ಜವಾಬ್ದಾರಿಯುತ ಜನಪ್ರತಿನಿಧಿಗೆ ಇಂತಹ ಹೇಳಿಕೆ ಖಂಡಿತಕ್ಕೂ ಶೋಭೆ ತರದು. ಬದಲಿಗೆ ಇದು ಅವರಿಗೆ ಖಂಡಿತಾ ಹಿನ್ನೆಡೆ  ದ ಕ ಜಿಲ್ಲೆ ಸಂಸದರಾಗಿದ್ದುಕೊಂಡು ತನ್ನನ್ನು ಆರಿಸಿದ ಕಳುಹಿಸಿದ ಪ್ರಜ್ಞಾವಂತರ ಜಿಲ್ಲೆಗೆ ಬೆಂಕಿ ಹಾಕುತ್ತೇನೆ ಎಂಬ ಬೆದರಿಕೆ ಹಾಕಿರುವುದು ಪ್ರಧಾನ ಮಂತ್ರಿಯವರ ಅಚ್ಛೇ ದಿನಗಳ ಭರವಸೆಯಲ್ಲಿರುವ ಜನತೆಗೆ ನಳಿನ್ ಯಾವ ಸಂದೇಶವನ್ನು ನೀಡಿದ್ದಾರೆ  ಆದ್ದರಿಂದ ಶಾಂತಿಯಿಂದ ಇರುವ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ

  • ಆಲಿ ಹಸನ್ 
    ಅಧ್ಯಕ್ಷ  ಮಾನವ್ ಸಮಾನತ್ ಮಂಚ್
    ಮಂಗಳೂರು