ಸಿನಿಮಾದಿಂದ ದೊರೆಯುವ ಸಂದೇಶ ಏನು ?

ಸಿನಿಮಾ ಅನ್ನುವುದು ಮನರಂಜನೆಗಾಗಿ ನೋಡುತ್ತೇವೆ ಹೊರತು  ಕಾಲಹರಣಕ್ಕಂತೂ ಖಂಡಿತಾ ಅಲ್ಲ. ಕೆಲವೊಂದು ಸನ್ನಿವೇಶ ವೀಕ್ಷಕರ ಮೇಲೆ ಪರಿಣಾಮ ಬೀಳುತ್ತದೆ. ಸಂದೇಶ ನೋಡುಗರಿಗೆ ಮುಟ್ಟಬಹುದು. ಈಗಿನ ಸಿನಿಮಾಗಳಲ್ಲಿ ಹೀರೋಗಳು ತುಂಬ ಡ್ರೆಸ್ ಹಾಕಿ ನಟಿಸಿದರೆ ಹೀರೋಯಿನ್‍ಗಳಾಗಲಿ ಅಥವಾ ಸಹನಟಿಗಳು ತೊಡೆ ತೋರಿಸುವ ಡ್ರೆಸ್ ಹಾಕಿ ನಟಿಸುತ್ತಾರೆ. ಇದು ಸಿನಿಮಾ ವೀಕ್ಷಕರ ಮೇಲೆ ಯಾವ ಪರಿಣಾಮ ಬೀಳುತ್ತದೆಂಬ ಕಲ್ಪನೆ ನಿರ್ದೇಶಕರಿಗಿಲ್ಲ. ಅಥವಾ ನಟಿಯರ ಜಾಯಮಾನವೇ ಹಾಗೆಯೇ ಇರಬಹುದೇ ? ಕಥೆಗೆ, ಸನ್ನಿವೇಶಕ್ಕೂ, ಇದು ಪೂರಕವೇ ? ಅಥವಾ ದರ್ಶಕರಿಗೆ ಭಂಗಿ ತೋರಿಸುವ ಉದ್ದೇಶವೇ ? ಬಟ್ಟೆಯ ಉಳಿತಾಯವೇ ? ರಸಿಕರ ಮನ ಒಪ್ಪಿಸುವ ಪ್ರಲೋಭನೆಯೇ ?

  • ಕೆ ಮನೋಹರ, ಮಂಗಳೂರು