ಟಿಪ್ಪು ವಿರೋಧಿಗಳ ಉತ್ತರವೇನು ?

ಕಳೆದ ವಾರ ಟೀವಿ ವಾಹಿನಿಯೊಂದರ ಚರ್ಚೆಯಲ್ಲಿ ಹೈದರಾಲಿ ಮತ್ತು ಟಿಪ್ಪು ಅವರು ಮೈಸೂರು ಒಡೆಯರಿಂದ ರಾಜ್ಯ ಕಿತ್ತುಕೊಂಡರೆಂದು ಒಂದು ಪಕ್ಷದವರು ಆಪಾದಿಸಿದರು ಮತ್ತೊಂದು ಪಕ್ಷದವರು ರಾಜ್ಯ ಕಿತ್ತುಕೊಂಡವರು ದೇವರಾಜ ಮತ್ತು ನಂಜರಾಜರೆಂಬ ದಳವಾಯಿಗಳೆಂದು ಸರಿಯಾಗಿಯೇ ಹೇಳಿದರು ಒಬ್ಬ ರಾಜಕೀಯ ಆಕಾಂಕ್ಷಿ ಮತ್ತೊಬ್ಬನನ್ನು ತಳ್ಳಿ ಮೇಲೆ ಬರುವುದು ಅಪರಾಧವಾದರೆ ಚರಿತ್ರೆಯ ಪುಟಗಳಲ್ಲಿ ಅಂಥವರ ದಂಡೇ ಇದೆ ಕೆಲ ಹಿಂದೂ ರಾಜರ ಉದಾಹರಣೆಯನ್ನೇ ನೋಡುವ ಮೌರ್ಯರ ಕೊನೇ ಸಾಮ್ರಾಟ ಬೃಹದ್ರಥನನ್ನು ಅವನ ಸೇನಾಪತಿ ಪುಷ್ಯಮಿತ್ರ ಶುಂಗನೇ ಕೊಂದು ಶುಂಗರಾಜ್ಯವನ್ನು ಸ್ಥಾಪಿಸಿದ ಪ್ರಧಾನಿ ತಿಮ್ಮರಸು ತನಗೆ ಹುಟ್ಟಿದ ಮಗನಾದ ಕೃಷ್ಣಾ ದೇವರಾಯನನ್ನೇ ವಿಜಯನಗರದ ಪಟ್ಟಕ್ಕೆ ತಂದನೆಂದು ಇತಿಹಾಸಕಾರ ಸೂರ್ಯನಾಥ ಕಾಮತ್ ಹೇಳಿದ್ದಾರೆ
ಶಿವಾಜಿ ವಂಶಸ್ಥರನ್ನು ಮೂಲೆಗುಂಪಾಗಿಸಿ ಅವರ ಮಂತ್ರಿಗಳಾಗಿದ್ದ ಪೇಶ್ವೇಗಳೇ ಮರಾಠ ಸಾಮ್ರಾಟರಾದರು ಸಜ್ಜನ ಬಿ ಬಿ ಶಿವಪ್ಪ ಅವರನ್ನು ಮೂಲೆಗುಂಪಾಗಿಸಿ ಬಿ ಎಸ್ ಯಡ್ಯೂರಪ್ಪ ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದರು ನರೇಂದ್ರ ಮೋದಿಯವರು ಎಲ್ ಕೆ ಅಡ್ವಾಣಿಯವರನ್ನು ಮೂಲೆಗುಂಪಾಗಿಸಿ ಪ್ರಧಾನಿಯಾದರು ಇದಕ್ಕೆಲ್ಲ ಏನನ್ನೋಣ

  • ಪುಷ್ಪರಾಜ  ದೇವಾಡಿಗ