ಈ ಪ್ರಶ್ನೆಗೆ ಕೇಂದ್ರ ಸಚಿವರ ಉತ್ತರವೇನು

ಗೌರಿ ಲಂಕೇಶರಿಗೆ ಜೀವ ಬೆದರಿಕೆ ಇದ್ದರೂ ಕರ್ನಾಟಕ ಸರಕಾರ ಸೂಕ್ತ ಭದ್ರತೆ ಕೊಡಲಿಲ್ಲ ಎಂದು ಕೇಂದ್ರ ಮಂತ್ರಿ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ ಅಂದು ಗುಜರಾತ್ 2003ರಲ್ಲಿ ಮೋದಿ ಮುಖ್ಯಮಂತ್ರಿ ಆಗಿದ್ದಾಗ ಮುಖ್ಯಮಂತ್ರಿ ಹುದ್ದೆಗೆ ಪ್ರತಿಸ್ಪರ್ಧಿಯಾಗಿದ್ದ ಅವರದೇ ಪಕ್ಷದ ಹರೇನ್ ಪಾಂಡ್ಯಾ ಎಂಬವರು ಸುಫಾರಿ ಕೊಲೆಯಾದರು ಪಾಂಡ್ಯರು ತನಗೆ ಜೀವ ಬೆದರಿಕೆ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರೂ ಆದರೂ ಅವರಿಗೇಕೆ ಮೋದಿಯ ಗುಜರಾತ್ ಸರಕಾರ ಸೂಕ್ತ ಭದ್ರತೆ ನೀಡಲಿಲ್ಲ ಹರೇನ್ ಪಾಂಡ್ಯಾರ ಕೊಲೆಗಾರ ಇಂದಿನವರೆಗೂ ಸಿಕ್ಕಿ ಬಿದ್ದಿಲ್ಲ ತುಳಸಿರಾಂ ಪ್ರಜಾಪತಿ ಪುಡಿಗಳ್ಳನನ್ನು ಫಿಕ್ಸ್ ಮಾಡಿ ನಕಲಿ ಎನ್ಕೌಂಟಿರಿನಲ್ಲಿ ಮುಗಿಸಿ ತಿಪ್ಪೆ ಸಾರಿಸಲಾಯಿತು ಪಾಂಡ್ಯ ಕೊಲೆಯಾಗಿ 14 ವರ್ಷ ಕಳೆದರೂ ಈ ಕೊಲೆಗೆ ಸೂಪರಿ ಕೊಟ್ಟ ಕಿಂಗ್ಪಿನ್ ಯಾರು ಎಂದು ಇಂದಿನವರೆಗೂ ಪತ್ತೆಯಾಗಿಲ್ಲ ಯಾಕೆ ಬಿಜೆಪಿಯ ಒಳಗಿನವರ ಮೇಲೆಯೇ ಆರೋಪವಿದೆ ತಾನೇ ಇದಕ್ಕೆ ಸಚಿವರು ಉತ್ತರಿಸಲಿ

  • ಅವಿನಾಶ್ ಸುವರ್ಣ  ಚಿಲಿಂಬಿ