ಇದು ಯಾವ ನಮೂನೆಯ ರೈಲು

ಸುಬ್ರಹ್ಮಣ್ಯದಿಂದ 1-10ಕ್ಕೆ ಮಂಗಳೂರಿಗೆ ಒಂದು ಲೋಕಲ್ ರೈಲು ಇದೇ ಎಂದು ಗೊತ್ತೇ   ಇದು ಪುತ್ತೂರಿಗೆ 2.30ಕ್ಕೆ ಬಂದು ಹೊರಡುತ್ತದೆ  ಇದರಲ್ಲಿ ಸುಬ್ರಹ್ಮಣ್ಯದ ಯಾತ್ರಾರ್ಥಿಗಳು ತುಂಬಾ ಜನರು ಬರುತ್ತಿದ್ದಾರೆ  ಆದರೆ ಇದಕ್ಕೆ ಹಲವಾರು ಗ್ರಹಚಾರಗಳು ಬರುತ್ತಲಿವೆ. ಪುತ್ತೂರಿನಿಂದ ಬಿ ಸಿ ರೋಡಿಗೆ ಕೇವಲ ಅರ್ಧ ಗಂಟೆಯಲ್ಲಿ ಬಂದರೆ, ಅಲ್ಲಿಂದ ಕಂಕನಾಡಿಗೆ ಡಿಸೇಲ್‍ಗಾಗಿ ಅರ್ಧಗಂಟೆ ಹಾಲ್ಟ್  ಅಲ್ಲಿಂದ ಹೊರಟರೆ ನಿಮಗೆ ತಾಳ್ಮೆ ಇದ್ರೆ ಮಾತ್ರ ಸಹಿಸಿಕೊಳ್ಳಿ  ಅಲ್ಲಲ್ಲಿ ಸಿಗ್ನಲ್   ಅಂತೂ ಹೊರಟರೆ ನಿಲ್ದಾಣದ ಹತ್ರವೇ ರೈಲು ಸ್ಟಾಪ್   ಅಂದರೆ ಪುತ್ತೂರಿನಿಂದ 2.30ಕ್ಕೆ ಹೊರಟ ರೈಲು ಮೊನ್ನೆ ದಿನ ತಲುಪಿದ್ದು 5.00ಕ್ಕೆ  ಇದನ್ನು ಕೇಳುವವರಿಲ್ಲ  ಬೇಕಾ ಇಂತ ರೈಲು

  • ಎಸ್ ಎಂ ಪುತ್ತೂರು