ಇದೆಂತ ಪರಿವರ್ತನಾ ಯಾತ್ರೆ

ಬಿಜೆಪಿ ಮತ್ತೊಮ್ಮೆ ಜನರಿಗೆ ಪಂಗನಾಮ ಹಾಕಲು ಯತ್ನಿಸುತ್ತಿದೆಯಾ ಹೌದು ಹಿಂದೊಮ್ಮೆ ಅಧಿಕಾರಕ್ಕೆ ಬಂದು ಏನಾಯಿತು ಐದು ವರ್ಷದ ಅವಧಿಯಲ್ಲಿ ಯಡ್ಯೂರಪ,್ಪ ಡಿ ವಿ ಸದಾನಂದ ಗೌಡ ಜಗದೀಶ್ ಶೆಟ್ಟರ್ ಸೇರಿ ಮೂರು ಮುಖ್ಯಮಂತ್ರಿಗಳ ಆಡಳಿತ ಕಂಡ ಬಿಜೆಪಿಗೆ ಅಧಿಕಾರ ಕೊಟ್ಟರೆ ಏನಾಗುತ್ತದೆ ಎಂದು ಜನರು ತಿಳಿಯದ ಸಂಗತಿಯೇನಲ್ಲ ಅದೇ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ಒಬ್ಬರೇ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಲು ಇನ್ನೇನು ಕೆಲವೇ ತಿಂಗಳು ಮಾತ್ರ ಬಾಕಿ ಇದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಬ್ಲೂಫಿಲಂ ಹಗರಣ ಕೋಟಿ ಕೋಟಿ ಆಸ್ತಿ ಹಗರಣ ವಿದ್ಯುತ್ ಖರೀದಿ ಹಗರಣ ಒಳಜಗಳ ಯಡ್ಯೂರಪ್ಪರ ಡಿ ನೋಟಿಫಿಕೇಷನ್ ಹೀಗೆ ಹಲವಾರು ಹಗರಣಗಳಿಂದ ಸರಕಾರವೇ ಉರುಳಿತು ಜೊತೆಯಲ್ಲಿ ಕೇಂದ್ರ ಸರಕಾರವು ಬಿಜೆಪಿ ಕೈಯಲ್ಲಿದೆ ನೋಟ್ ಬ್ಯಾನ್ ಬೆಲೆಯೇರಿಕೆ ಹದಗೆಟ್ಟ ಬ್ಯಾಂಕ್ ವ್ಯವಸ್ಥೆ ಹೀಗೆ ಎಲ್ಲ ಮಾಧ್ಯಮ ವರ್ಗದವರಿಗೆ ಹೊಡೆತ ಇನ್ನು ಇವೆರೆಡು ಸೇರಿದರೆ ದೇವರೇ ಗತಿ ಅಲ್ಲವೇ ಬದಲಾಗಬಹುದಾ ಪರಿವರ್ತನಾಯಾತ್ರೆಯ ಫಲ ನಿರೀಕ್ಷಿಸುತ್ತಿದ್ದಾರೆ ಜನ ಒಳ್ಳೆಯತನ

  • ಕೇಶವ  ಪುತ್ತೂರು