ಶ್ರೀನಿವಾಸ ಪ್ರಸಾದ್ ಹಿರಿಯ ರಾಜಕಾರಣಿಯಾಗಿ ಯುವ ಸಮುದಾಯಕ್ಕೆ ನೀಡಿದ ಸಂದೇಶವೇನು

ಮಂತ್ರಿಯಾಗಿದ್ದಾಗ ಆಲಸ್ಯ ಮತ್ತು ಉಢಾಪೆತನದಿಂದ ವರ್ತಿಸಿ ಜನವಿರೋಧ ಕಟ್ಟಿಕೊಂಡಿದ್ದ ತನ್ನನ್ನು ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಸೀಎಂ ಮೇಲೆ ಕೋಪಗೊಂಡು ಚಾರಿತ್ರ್ಯಹರಣ ರಾಜಕೀಯದಲ್ಲಿ ತೊಡಗಿ ಇದೀಗ ಬಿಜೆಪಿ ಕ್ಯಾಂಪಿನೊಳಗೆ ಹೋಗಿ ಬಿದ್ದಿರುವ ಮುಂದಿನ ಚುನಾವಣೆವರೆಗೆ ತೆಪ್ಪಗಿದ್ದದ್ದರೆ ಅದಕ್ಕೊಂದು ಬೆಲೆ ಬರುತ್ತಿತ್ತು  ಅದೂ ಸಾಧ್ಯವಾಗದಿದ್ದರೆ  ದಲಿತರ ಪಕ್ಷ ಬಹುಜನ ಸಮಾಜದಿಂದ ಸ್ಪರ್ಧಿಸಬಹುದಿತ್ತು  ಆಗ ಬಹುಜನರ ಪಕ್ಷಕ್ಕೆ ಒಂದು ಶಕ್ತಿಯನ್ನಾದರೂ ತಮ್ಮ ರಾಜಕೀಯದ ಕೊನೆ ದಿನಗಳಲ್ಲಿ ತಂದು ಕೊಟ್ಟ ಕೀರ್ತಿ ಅವರದ್ದಾಗಿರುತ್ತಿತ್ತು  ಆದರೆ ಕೇವಲ ತಮ್ಮ ವೈಯಕ್ತಿಕ ಅಧಿಕಾರಕ್ಕಾಗಿ ಮತ್ತು ರಾಜಕೀಯ ಸೇಡಿಗಾಗಿ ಕ್ಷೇತ್ರಕ್ಕೆ ಮರುಚುನಾವಣೆ ನಡೆಯುವಂತೆ ಮಾಡಿರುವುದು ಒಳ್ಳೆಯ ನಡೆಯಲ್ಲ  ಅದರಲ್ಲೂ ಕೋಮುವಾದಿ ಬಿಜೆಪಿ ಸಖ್ಯದಲ್ಲಿ ಚುನಾವಣೆ ಎದುರಿಸುತ್ತಿರುವುದಂತೂ ನಮಗೆ ಜೀರ್ಣಿಸಿಕೊಳ್ಳಲೂ ಸಾಧ್ಯವಾಗದ ತೀರ್ಮಾನ  ಅವರು ಲೆಕ್ಕಾಚಾರ ಹಾಕಿರುವಂತೆ ಖಂಡಿತ ಬಿಜೆಪಿಯಿಂದ ಗೆಲ್ಲುವುದು ಅಷ್ಟು ಸುಲಭವಲ್ಲ ಜನರೂ ಬಹಳ ಹುಷಾರಾಗಿದ್ದಾರೆ  ಇದರಿಂದ ದಲಿತ ಸಮುದಾಯಕ್ಕೆ ಸಿಕ್ಕ ಲಾಭವೇನು
ಹೋಗಲಿ ಅವರನ್ನು ಈತನಕ ಅನುಸರಿಸಿದ ಯುವ ಸಮುದಾಯಕ್ಕೆ ಹಿರಿಯ ರಾಜಕಾರಣಿಯಾಗಿ ನೀಡುವ ಸಂದೇಶವೇನು   ಈ ಹಿರಿತನದಲ್ಲಿ ಇವರು ಇಂಥ ಹೆಜ್ಜೆ ಇಡಬಹುದಿತ್ತೆ   ತಮ್ಮ ವೈಯಕ್ತಿಕ ರಾಜಕಾರಣಕ್ಕಾಗಿ ಬಿಜೆಪಿಯಂತಹ ಕೋಮುವಾದಿ  ಮುನುವಾದಿ ಪಕ್ಷಕ್ಕೆ ನೆಲೆ ಕಲ್ಪಿಸಿಕೊಡುತ್ತಿರುವುದು ನ್ಯಾಯವೇ   ಸಂಘ ಪರಿವಾರಿಗಳು ಪಂಜಾಬ್  ಹರಿಯಾಣ  ಉತ್ತರಪ್ರದೇಶ  ಊನಾ  ಉಡುಪಿ ಮುಂತಾದೆಡೆ ನಡೆಸಿದ ಅಮಾನುಷ ದಲಿತ ದೌರ್ಜನ್ಯಗಳನ್ನು ನೋಡಿಯೂ ಬಿಜೆಪಿಯಲ್ಲಿ ಈಗ ಗರ್ಭಗುಡಿ ಸಂಸ್ಕøತಿಯಿಲ್ಲ ಎಂದು ಹೇಗೆ ಅನಿಸಿತು   ದೇಶದ ಕೋಟ್ಯಂತರ ಬಡ ಜನರ ಜೀವನಕ್ಕೆ ಮಾರಕವಾದ ನೋಟು ಅಮಾನ್ಯ ಹಾಗೂ ಡಿಜಿಟಲ್ ಜೀವನ ತಂದ ಮೋದಿಯು ಇವರಿಗೆ ಹೇಗೆ ಉತ್ತಮ ಆಡಳಿತಗಾರ ಎನಿಸಿದರು

  • ಎಂ ಅವಿನಾಶ್  ಮಂಗಳೂರು