ಅರಣ್ಯ ಇಲಾಖೆ ಏನು ಮಾಡುತ್ತಿದೆ

ಬೆಂಕಿ ಬಿದ್ದು ಅರಣ್ಯ ನಾಶ ಮರಗಳೆಲ್ಲ ಕಳ್ಳರ ಪಾಲು  ಪ್ರಾಣಿ  ಪಕ್ಷಿ  ಹಾವುಗಳ ಮಾರಣ ಸಾವು  ಆನೆಗಳ ನಿಗೂಢ ಸಾವು  ಸಸ್ಯ ಸಂಪತ್ತೆಲ್ಲ ನಾಶ  ಇದೇನಿದು ಎಂದು ಯೋಚಿಸುತ್ತಿದ್ದೀರಾ  ಇದು ಕರ್ನಾಟಕದ ಅರಣ್ಯ ಇಲಾಖೆಯ ಘೋಷಣೆಗಳು  ಪತ್ರಿಕಾ ವರದಿಗಳು  ಇಲ್ಲಿ ಒಂದು ಮಾತು ಹೇಳಲೇಬೇಕು  ಇಷ್ಟೆಲ್ಲ ಅನಾಹುತವಾದರೂ ಅರಣ್ಯ ಇಲಾಖೆ ಏನು ಮಾಡುತ್ತಿದೆ   ಸರಕಾರ ಬೇಕಾದಷ್ಟು ವ್ಯವಸ್ಥೆಗಳನ್ನು ಸೌಕರ್ಯಗಳನ್ನು ಮಾಡಿ ಕೊಟ್ಟರೂ ಏನೂ ಪ್ರಯೋಜನ ಈ ಇಲಾಖೆಯಿಂದ ಇಲ್ಲ  ಪ್ರತಿ ವರ್ಷ ಕಾಡಿಗೆ ಬೆಂಕಿ ಬೀಳಲು  ಮರ ಕಾಣೆಯಾಗಲು ಏನು ಕಾರಣ   ಇಲಾಖೆಯ ಬೇಜವಾಬ್ದಾರಿಯಾ  ಇನ್ನಾದರೂ ಈ ಇಲಾಖೆಗೆ ಕಣ್ಣಿಡಿರಿ

  • ಮುರಾರಿ ಪುತ್ತೂರು