ಮೋದಿ ಆಡಳಿತದಿಂದ ಜನರಿಗೆ ದಕ್ಕಿದ್ದೇನು

ಪ್ರಧಾನಮಂತ್ರಿ ಮೋದಿಯವರ ಐವತ್ತು ದಿನಗಳ ಮೋಡಿಯು ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚಾಯಿತು ಎಂದು ಅವರ ಡಿಸೆಂಬರ್ ತಿಂಗಳ 31ನೇ ತಾರೀಕಿನ ಭಾಷಣದ ಅಂಕಿ ಅಂಶಗಳ ಮೇಲ್ನೋಟದಲ್ಲೇ ತೋರಿ ಬಂತು
ವ್ಯಾಪಾರದಲ್ಲಿ ನಿಷ್ಕ್ರಿಯತೆ  ಬಡವರ ದಿನಗೂಲಿಯ ಬವಣೆ ಹಾಗೂ ಸಾವು ನೋವುಗಳಿಂದ ಕುಟುಂಬಗಳಿಗೆ ತುಂಬಲಾಗದ ನಷ್ಟ ಮತ್ತು ಆಘಾತ ಇವುಗಳೊಂದಿಗೆ ನಮಗೆ ಸಿಕ್ಕಿರುವುದು ಬರೀ ಬವಣೆ. ಸಂತೆ ಜೊತೆ  ಕಾಳಸಂತೆ ಇದ್ದೇ ಇರುತ್ತೆ  ಈ ವಾಸ್ತವದ ಅರಿವಿಲ್ಲದೆ ಏನೇ ಮಾಡಿದರೂ ಉಪಯೋಗವಿಲ್ಲ  ಹಾಗೆ ನೋಡಿದರೆ ದಿವಂಗತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಯಾರಿಗೂ ತೊಂದರೆ ಕೊಡದೆ ಮಧ್ಯಮ ಮತ್ತು ಬಡ ಜನರಿಗೆ ಕೊಟ್ಟ ಕೊಡುಗೆ ಅತ್ಯಂತ ಅಮೂಲ್ಯ ಹಾಗೂ ಶ್ಲಾಘನೀಯ  ಅತ್ಯಂತ ಶ್ರೀಮಂತ ಮತ್ತು ಬುದ್ಧಿಜೀವಿಗಳ ರಾಷ್ಟ್ರಗಳೇ ಪೂರ್ಣ  ಕ್ಯಾಶ್‍ಲೆಸ್   ನಗದುರಹಿತ  ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ಇರುವಾಗ ಇದನ್ನು ನಮ್ಮ ದೇಶಕ್ಕೆ ಯೋಚಿಸುವುದು ಒಂದು ಭ್ರಮೆಯಷ್ಟೇ   ಈಗಾಗಲೇ ಕೇಂದ್ರ ಸರಕಾರದ ವಿಶ್ವಾಸಘಾತಕ ಕೃತ್ಯಗಳು ನಮ್ಮ ದೇಶದ ಸಮೃದ್ಧ ಭರಿತ ವಹಿವಾಟಿಗೆ ಆಘಾತದ ಸನ್ನಿವೇಶವನ್ನು ನಿರ್ಮಿಸಿವೆ  ಆರ್ಥಿಕ ಸಮಸ್ಯೆಗಳನ್ನು ತಜ್ಞರ ಸಲಹೆ ಮೇರೆಗೆ ಪರಿಹರಿಸಬೇಕೆ ಹೊರತು ರಾಜಕೀಯ ಪ್ರೇರಿತ ಆವೇಶದ ಯೋಚನೆಗಳಿಂದ ಅಲ್ಲ

  • ಕೆ ಸುಹಾಸ್ ಕೋಟ್ಯಾನ್
    ಕೊಡಿಯಾಲ್‍ಬೈಲ್ಮಂ ಗಳೂರು