ಪೂಜಾರಿಗೆ ಏನಾಗಿದೆ

ಪಾರ್ಲಿಮೆಂಟ್ ಚುನಾವಣೆಯಲ್ಲಿ ಸಂಸದ ನಳಿನ್‍ಕುಮಾರ್ ಎದುರು ಸೋಲಿನ ಮೇಲೆ ಸೋಲು ಕಂಡರೂ ಜನಾರ್ಧನ ಪೂಜಾರ್ರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ  ಈ ರೀತಿ ಸೋಲು ಕಂಡರೂ ಕಾಂಗ್ರೆಸ್ ಪಕ್ಷ ಮತ್ತೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿತ್ತು  ಅದೇ ಕಾಂಗ್ರೆಸ್ ಪಕ್ಷದ ವಿರುದ್ಧ ವಾರದಲ್ಲಿ ಎರಡ್ಮೂರು ಪತ್ರಿಕಾಗೋಷ್ಠ್ಠಿ ಕರೆದು ಬಾಯಿಗೆ ಬಂದಂತೆ ಭವಿಷ್ಯ ನುಡಿಯುತ್ತಿದ್ದಾರೆ  ಅದೇ ಬಿಜೆಪಿಯವರಾಗಿರುತ್ತಿದ್ದರೆ ಒಂದು ಬಾರಿ ಸೋತ ಅಭ್ಯರ್ಥಿಗೆ ಎಂದೂ ಮತ್ತೆ ಸ್ಪರ್ಧಿಸಲು ಅವಕಾಶ ಕೊಡುತ್ತಿರಲಿಲ್ಲ
ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿಯೇ ಪೂಜಾರಿ ಹಠ ಹಿಡಿದು ಸೀಟು ದಕ್ಕಿಸಿಕೊಂಡರೂ ಗೆಲ್ಲಲು ಸಾಧ್ಯವಾಗಲಿಲ್ಲ  ಅಂಥದ್ದರಲ್ಲಿ ಕಾಂಗ್ರೆಸ್ ಪಕ್ಷ ಪೂಜಾರಿಗೆ ಈಗ ಬೇಡವಾಯಿತು

  • ಸುಕೇಶ್ ಸುವರ್ಣ
    ಕುದ್ರೋಳಿ ಮಂಗಳೂರು