ಬಿಜೆಪಿ ಸಂಸದರಿಗೆ ಏನಾಗಿದೆ

ಮಂಗಳೂರು ಸಂಸದ ನಳಿನಕುಮಾರ ಕಟೀಲ್ ದ ಕ ಜಿಲ್ಲೆಗೆ ಬೆಂಕಿ ಹಾಕುತ್ತೇವೆ ಎಂದು ಪೊಲೀಸ್ ಠಾಣೆ ಎದುರು ಗುಡುಗಿದರೆ  ಮತ್ತೊಬ್ಬ ಉತ್ತರ ಕನ್ನಡ ಸಂಸದ ವೈದ್ಯರ ಮೇಲೆ ಹಲ್ಲೆ ಮಾಡಿ  ನಾನು ಯಾವತ್ತೂ ಹೀಗೆಯೇ  ಎಂದಿದ್ದಾರೆ  ಇದು ಅಧಿಕಾರದ ಠೇಂಕಾರವಲ್ಲದೇ ಬೇರೇನೂ ಅಲ್ಲ  ಕಾನೂನು ಸುವ್ಯವಸ್ಥೆ ಬಗ್ಗೆ ಗಂಧಗಾಳಿ ಗೊತ್ತಿಲ್ಲದವರು ಬೆಂಕಿ ಹಾಕುವ ಬಗ್ಗೆ ಮಾತನಾಡಿದರೆ  ಮತ್ತೊಬ್ಬರು ತಮ್ಮ ತಾಯಿ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂದು ವೈದ್ಯರಿಗೆ ಹಿಗ್ಗಾ ಮುಗ್ಗಾ ಬಾರಿಸಿದ್ದಾರೆ  ಸಾರ್ವಜನಿಕ ಜೀವನದಲ್ಲಿ ಯಾವುದೇ ಭ್ರಷ್ಟಾಚಾರ ಕಾಣಿಸಿಕೊಂಡರೂ ಇವರಿಗೆ ಇಷ್ಟೇ ರೋಷ  ಆವೇಶ ಬರುತ್ತದೆಯೇ  ಜನಪ್ರತಿನಿಧಿಗಳು ಸಂಯಮ ಕಳೆದುಕೊಳ್ಳದೇ  ಕಾನೂನು ಸುವ್ಯವಸ್ಥೆ ಕಾಪಾಡಲಿ  ಜನರ ಗೌರವ ಉಳಿಸಲಿ

  • ಎನ್ ರಾಜೇಶ್ ಅಡಿಗ
    ಮಂಗಳೂರು