ನಾವು ಬಿಸಾಕಿದ ಪ್ಲಾಸ್ಟಿಕ್ ತ್ಯಾಜ್ಯ ಏನಾಗುತ್ತದೆ ಗೊತ್ತೆ ?

ಸಾಂದರ್ಭಿಕ ಚಿತ್ರ

ಜಲಚರಗಳು ಈ ಪ್ಲಾಸ್ಟಿಕ್ ಚೂರುಗಳುನ್ನು ಆಹಾರವೆಂದು ತಪ್ಪಾಗಿ  ತಿಳಿದು ಅವುಗಳನ್ನು ಸೇವಿಸುತ್ತವೆ ಹಾಗೂ  ಅಂತಿಮವಾಗಿ ಈ ಜಲಚರಗಳನ್ನು ನಾವು ಆಹಾರವಾಗಿ ಉಪಯೋಗಿಸಿದಾಗ ಈ ವಿಷಕಾರಿ ತ್ಯಾಜ್ಯಗಳು ನಮ್ಮ ಹೊಟ್ಟೆ ಸೇರಿ ಬಿಡುತ್ತವೆ.

ಬಿಸಿಲಿನ ತಾಪಕ್ಕೆ ದಾಹ ತಡೆಯಲಾರದೆ ನೀವು ನಿಮ್ಮ ಅಚ್ಚುಮೆಚ್ಚಿನ ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲಿಯೊಂದನ್ನು ಖರೀದಿಸಿ ಸಂತಸದಿಂದ ಗಟಗಟನೆ ಕುಡಿದು ಬಾಯಾರಿಕೆ ನೀಗಿಸುತ್ತೀರಿ. ನಂತರ ಆ ಬಾಟಲಿಯನ್ನು ಹತ್ತಿರದ ಕಸದ ತೊಟ್ಟಿಗೆ ಎಸೆದು ಮುಂದೆ ಹೆಜ್ಜೆ ಹಾಕುತ್ತೀರಿ. ಆದರೆ ನೀವು ಎಸೆದ ಆ ಪ್ಲಾಸ್ಟಿಕ್ ಬಾಟಲಿಗೆ ಏನಾಗುವುದೆಂದು ಯಾವತ್ತಾದರೂ ಯೋಚಿಸಿದ್ದೀರಾ ? ಅದು ಅದರ ಪಯಣದ ಅಂತ್ಯವೋ ಇಲ್ಲ ಆರಂಭವೋ ? ನೀವು ಎಸೆದ ಆ ಪ್ಲಾಸ್ಟಿಕ್ ಬಾಟಲಿ  ಮುಂದೊಂದು ದಿನ ನೀವು ಉಣ್ಣುವ ಬಟ್ಟಲಾಗಬಹುದೆಂದು ಹೇಳಿದರೆ ನಂಬುತ್ತೀರಾ ?

ವಿಶ್ವ ಭೂ ದಿನದಂದು ಟೆಡ್-ಎಡ್ ಬಿಡುಗಡೆಗೊಳಿಸಿರುವ ವೀಡಿಯೋವೊಂದು  ಈ ಕಥೆಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತದೆ. ಕೆಲವು ತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳನ್ನು  ಸಂಸ್ಕರಿಸಿ ಮರು ಉಪಯೋಗಿಸಲಾಗುತ್ತದೆ. ಆದರೆ ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯಗಳು ನಮ್ಮ ನೀರಿನ ಮೂಲಗಳನ್ನು ಸೇರಿ ಅವುಗಳನ್ನು ವಿಷಕಾರಿಯಾಗಿಸುತ್ತದೆ. ಈ ಪ್ಲಾಸ್ಟಿಕ್ ತ್ಯಾಜ್ಯಗಳು ಮಣ್ಣಿನಲ್ಲಿ ನಾಶವಾಗಿ ಹೋಗಲು  ಕನಿಷ್ಠ ಒಂದು ಸಾವಿರ ವರ್ಷ ಹಿಡಿಯಬಹುದು. ಹೀಗೆ ಸಮಯ ಸಾಗಿದಂತೆಲ್ಲಾ  ಈ ತ್ಯಾಜ್ಯಗಳು ಮೈಕ್ರೋ ಪ್ಲಾಸ್ಟಿಕ್ ರೂಪದಲ್ಲಿ ಚೂರು ಚೂರಾಗಿ ಪರಿಸರಕ್ಕೆ ಮಾರಕವಾಗಿ ಬಿಡುತ್ತವೆ.

ಜಲಚರಗಳು ಈ ಪ್ಲಾಸ್ಟಿಕ್ ಚೂರುಗಳುನ್ನು ಆಹಾರವೆಂದು ತಪ್ಪಾಗಿ  ತಿಳಿದು ಅವುಗಳನ್ನು ಸೇವಿಸುತ್ತವೆ ಹಾಗೂ  ಅಂತಿಮವಾಗಿ ಈ ಜಲಚರಗಳನ್ನು ನಾವು ಆಹಾರವಾಗಿ ಉಪಯೋಗಿಸಿದಾಗ ಈ ವಿಷಕಾರಿ ತ್ಯಾಜ್ಯಗಳು ನಮ್ಮ ಹೊಟ್ಟೆ ಸೇರಿ ಬಿಡುತ್ತವೆ. ಹಲವಾರು ಬಾರಿ ನೀರಿನ ಮೂಲಗಳಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಅಂತಿಮವಾಗಿ ಸಮುದ್ರವನ್ನು ಸೇರಿ ಅಲ್ಲಿನ ಸುಳಿಯಲ್ಲಿ ಸಿಲುಕಿ  ಲಕ್ಷಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯದ ಚೂರುಗಳಲ್ಲಿ ಒಂದಾಗುತ್ತದೆ.

ಈ ಟೆಡ್-ಎಡ್ ವೀಡಿಯೋ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿಗೊಳಿಸದೇ ಇದ್ದಾಗ ಉಂಟಾಗುವ ಸಮಸ್ಯೆಗಳು ಹಾಗೂ ಅಪಾಯಗಳನ್ನು ವಿವರಿಸುತ್ತದೆ.