ಮರಣದಂಡನೆ ತಪ್ಪಿಸಲು ಕುಲಭೂಷಣ್ ಮುಂದೆ ಇರುವ ದಾರಿಗಳ್ಯಾವುವು ?

ನವದೆಹಲಿ : ಭಾರತದ ಮಾಜಿ ನೌಕಾದಳ ಅಧಿಕಾರಿ ಕುಲಭೂಷಣ್ ಜಾಧವ್ ಮೇಲಿನ ಗೂಢಚರ್ಯೆ ಆರೋಪ ಸಾಬೀತಾಗಿದೆಯೆಂದು ಹೇಳಿಕೊಂಡು ಅವರಿಗೆ ಪಾಕಿಸ್ತಾನದ ಮಿಲಿಟರಿ  ನ್ಯಾಯಾಲಯ ಮರಣದಂಡನೆ ಶಿಕ್ಷೆ ಘೋಷಿಸಿರುವುದನ್ನು ಭಾರತ ಬಲವಾಗಿ ಖಂಡಿಸಿದ್ದು ಜಾಧವ್ ಅವರನ್ನು ಮರಣದಂಡನೆಯಿಂದ ಪಾರು ಮಾಡಲು ಸರ್ವ ಪ್ರಯತ್ನ ನಡೆಸಲು ಸನ್ನದ್ಧವಾಗಿದೆ. ಈ ನಿಟ್ಟಿಲ್ಲಿ ಸಂಸತ್ತಿನಲ್ಲಿ ಮಂಡಿಸಲು ಕರಡು ನಿರ್ಣಯವೊಂದನ್ನು ತಯಾರಿಸಲು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಸಹಾಯ ಪಡೆಯಲಿದ್ದಾರೆ.

ಸದ್ಯ ಜಾಧವ್ ಅವರು ಮರಣದಂಡನೆ ತಪ್ಪಿಸುವ ಸಲುವಾಗಿ ಮಿಲಿಟರಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಪೀಲು ಸಲ್ಲಿಸಬಹುದಾಗಿದೆ. ಇದು ತಿರಸ್ಕøತಗೊಂಡಲ್ಲಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೂ ಕ್ಷಮಾದಾನ ಕೋರಿ ಮನವಿ ಸಲ್ಲಿಸಬಹುದಾಗಿದೆ. ಅದು ಕೂಡ ತಿರಸ್ಕøತಗೊಂಡಲ್ಲಿ ಅವರು ಪಾಕಿಸ್ತಾನದ ಅಧ್ಯಕ್ಷರಿಗೇ ಮನವಿ  ಸಲ್ಲಿಸಬಹುದಾಗಿದೆ.

ಭಾರತದ ಬೆದರಿಕೆಗಳಿಗೆಲ್ಲ ಬಗ್ಗೆವು : ಪಾಕ್ ಪ್ರಧಾನಿ

ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್‍ಗೆ ಪಾಕಿಸ್ತಾನ ಕೋರ್ಟ್ ಮರಣ ದಂಡನೆ ಶಿಕ್ಷೆ ತೀರ್ಪಿತ್ತ ಬಳಿಕ ಪ್ರಥಮ ಬಾರಿ ಹೇಳಿಕೆ ನೀಡಿದ ಪಾಕ್ ಪ್ರಧಾನಿ ನವಾಜ್ ಶರೀಫ್, ಭಾರತದ ಯಾವುದೇ ಬೆದರಿಕೆಗೆ ಉತ್ತರ ನೀಡಲು ದೇಶದ ಶಸಸ್ತ್ರ ಪಡೆ ಸಮರ್ಥವಾಗಿದೆ. ಜಾಧವ್‍ಗೆ ಮರಣ ದಂಡನೆ ನೀಡಲು ಮುಂದಾಗಬೇಡಿ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಎಚ್ಚರಿಕೆ ನೀಡಿದ ಬಳಿಕ ಈ ಹೇಳಿಕೆ ಹೊರಬಿದ್ದಿದೆ.