ನಿಧಾನಗತಿ ಪ್ರಗತಿ ಹೊರತಾಗಿಯೂ ಹೆಚ್ಚಿದ ಸಹಸ್ರಕೋಟಿ ಶ್ರೀಮಂತರ ಆಸ್ತಿ

ಭಾರತೀಯ ಶತಕೋಟಿ ಶ್ರೀಮಂತರಿಗೆ 2017 ಬಂಪರ್ ವರ್ಷವಾಗಿತ್ತು. ಭಾರತದ ಅರ್ಥವ್ಯವಸ್ಥೆ ನಿಧಾನಗತಿಯಲ್ಲಿ ಸಾಗುತ್ತಿದ್ದರೂ ಗೌತಮ್ ಅದಾನಿ, ಮುಕೇಶ್ ಅಂಬಾನಿ ಮತ್ತು ಸುನೀಲ್ ಮಿತ್ತಲ್ ಅವರ ಆಸ್ತಿಯಲ್ಲಿ ತೀವ್ರತಮ ಏರಿಕೆಯಾಗಿದೆ. ಅದಾನಿ ಗ್ರೂಪ್ ಅಧ್ಯಕ್ಷರಾದ ಅದಾನಿಯ ಶ್ರೀಮಂತಿಕೆ ಅಥವಾ ಒಟ್ಟು ಮೌಲ್ಯ ಈ ಅವಧಿಯಲ್ಲಿ ಶೇ 120ರಷ್ಟು ಏರಿರುವುದು ಶತಕೋಟಿ ಶ್ರೀಮಂತರಲ್ಲೇ ವೇಗವಾದ ಬೆಳವಣಿಗೆಯಾಗಿದೆ.

ಬ್ಲೂಮ್ ಬರ್ಗಿನ ಶತಕೋಟಿ ಶ್ರೀಮಂತರ ಸೂಚ್ಯಂಕದ ಅಂಕಿಅಂಶಗಳ ಪ್ರಕಾರ 2017ರಲ್ಲಿ ಅದಾನಿ ಸಮೂಹವು ವಿದ್ಯುತ್ ಪ್ರಸರಣದ ಕ್ಷೇತ್ರದಲ್ಲಿ ಸಾಕಷ್ಟು ಆಸ್ತಿ ಗಳಿಸಿದೆ. ಆದರೆ ಆಸ್ಟ್ರೇಲಿಯದ ತನ್ನ ದೊಡ್ಡ ಕಲ್ಲಿದ್ದಲು ಗಣಿಗಾರಿಕೆ ಉದ್ಯಮದ ಯೋಜನೆಯಲ್ಲಿ ಬಹಳಷ್ಟು ಸಮಸ್ಯೆಯನ್ನೂ ಎದುರಿಸಿದೆ.ಇತರ ಹಲವು ಶ್ರೀಮಂತರೂ ಈ ವರ್ಷ ಇನ್ನಷ್ಟು ಶ್ರೀಮಂತರಾಗಿದ್ದಾರೆ.

ಮುಖೇಶ್ ಅಂಬಾನಿ

ರಿಲಾಯನ್ಸ್ ಜಿಯೋ ಆರಂಭವು ಭಾರತೀಯ ದೂರವಾಣಿ ಕ್ಷೇತ್ರದಲ್ಲಿ ದೊಡ್ಡ ಪರಿವರ್ತನೆಗೆ ಕಾರಣವಾಗಿದೆ. ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬರೋಬ್ಬರಿ ರೂ 1113 ಶತಕೋಟಿ ಅಥವಾ ತನ್ನ ಒಟ್ಟು ಮೌಲ್ಯದ ಶೇ 77ರಷ್ಟು ಆಸ್ತಿಯನ್ನು ಸೇರಿಸಿಕೊಂಡು ರೂ 2551 ಶತಕೋಟಿ ಶ್ರೀಮಂತರಾಗಿದ್ದಾರೆÉ. ಅವರ ಪ್ರಮುಖ ಸಂಸ್ಥೆಯಾಗಿರುವ ರಿಲಾಯನ್ಸ್ ಇಂಡಸ್ಟ್ರೀಸ್  (ಆರ್ ಐ ಎಲ್) ಷೇರು ಈ ಲಾಭದ ಮುಖ್ಯಪಾಲನ್ನು ನೀಡಿದೆ. ರಿಲಾಯನ್ಸ್ ಜಿಯೋ 2017 ಫೆಬ್ರವರಿಯಿಂದ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿದಂದಿನಿಂದ ಈ ಲಾಭದ ಗತಿ ಏರಲಾರಂಭಿಸಿದೆ. ಅಲ್ಲಿವರೆಗೆ, ಬಹಳಷ್ಟು ಮಂದಿ ಅಂಬಾನಿ ರೂ 2 ಲಕ್ಷ ಕೋಟಿ ಹೂಡಿಕೆ ಮಾಡಿದ ರಿಲಾಯನ್ಸ್ ದೂರವಾಣಿ ಯೋಜನೆ ಸೋಲುವ ಭವಿಷ್ಯ ನುಡಿದಿದ್ದರು. ದೂರವಾಣಿ ಉದ್ಯಮದ ಜೊತೆಗೆ ಅವರ ಪ್ರಮುಖ ಉದ್ಯಮಗಳಾದ ರಿಫೈನಿಂಗ್ ಮತ್ತು ಪೆಟ್ರೋಕೆಮಿಕಲ್ಸ್ ಕೂಡ ಲಾಭ ಮಾಡಿವೆ.

ಸುನೀಲ್ ಮಿತ್ತಲ್

ಕುತೂಹಲಕರ ಅಂಶವೆಂದರೆ ಸುನೀಲ್ ಮಿತ್ತಲ್ ಅವರು ದೂರವಾಣಿ ಕ್ಷೇತ್ರದಲ್ಲಿ ಅಂಬಾನಿಗೆ ಪರಮಶತ್ರು. ಹಾಗಿದ್ದರೂ ಅವರು ಒಟ್ಟು ಆಸ್ತಿಯಲ್ಲಿ ಶೇ 74ರಷ್ಟು ಏರಿಕೆಯಾಗಿ ರೂ 960.46 ಶತಕೋಟಿ ಶ್ರೀಮಂತರಾಗಿದ್ದಾರೆ. ಕಳೆದ ಸೆಪ್ಟೆಂಬರಿನಲ್ಲಿ ಜಿಯೋ ಬಂದು ಆರಂಭದ ತಿಂಗಳಲ್ಲಿ ಉಚಿತ ಸೇವೆ ನೀಡಲಾರಂಭಿಸಿದಾಗ ಕಂಗಾಲಾಗಿದ್ದ ಮಿತ್ತಲ್ ಸಂಸ್ಥೆ, ನಂತರ ದೂರವಾಣಿ ಸಮರದಲ್ಲಿ ಚೆನ್ನಾಗಿ ಸವಾಲನ್ನು ಎದುರಿಸಿದೆ. ಅವರ ಶ್ರೀಮಂತಿಕೆ ಹೆಚ್ಚಾಗಲು ಭಾರತಿ ಏರ್ ಟೆಲ್ ಷೇರು ಪ್ರಮಾಣ ಏರಿರುವುದೂ ಮುಖ್ಯಕಾರಣ.

ಪಲ್ಲೋಂಜಿ ಮಿಸ್ತ್ರಿ

ಟಾಟಾ ಜೊತೆಗೆ ಕಾನೂನು ಸಮರವನ್ನು ಹೂಡಿರುವ ಪಲ್ಲೋಂಜಿ ಮಿಸ್ತ್ರಿ ಕುಟುಂಬವೂ ಶೇ 23.7ರಷ್ಟು ಲಾಭ ಮಾಡಿದ್ದು, ಕುಟುಂಬದ ಒಟ್ಟು ಆಸ್ತಿ ಮೌಲ್ಯ ರೂ 1084 ಶತಕೋಟಿಗೆ ಏರಿದೆ. ಮಿಸ್ತ್ರಿ ಕುಟುಂಬವು ಟಾಟಾ ಸಂಸ್ಥೆಯಲ್ಲಿ ಹೊಂದಿರುವ ಶೇ  18.5ರಷ್ಟು ಷೇರಿನ ಲಾಭದ ಮೇಲೆ ಈ ಆಸ್ತಿ ಗಳಿಸಿದೆ. ಈ ವರ್ಷ ಟಿಸಿಎಸ್ ಷೇರು ಶೇ 11ರಷ್ಟು ಏರಿದ್ದರೆ, ಟೈಟಾನ್ ಮತ್ತು ಟಾಟಾ ಸ್ಟೀಲ್ ಷೇರುಗಳು ಕ್ರಮವಾಗಿ ಶೇ 160 ಮತ್ತು ಶೇ 87ರಷ್ಟು ಏರಿವೆ.

ಲಕ್ಷ್ಮೀ ಮಿತ್ತಲ್

ಲಂಡನ್ ನಿವಾಸಿ ಸ್ಟೀಲ್ ದೈತ್ಯ ಲಕ್ಷ್ಮೀ ಮಿತ್ತಲ್ ಅವರ ಷೇರುಗಳಲ್ಲಿ ಸಿಕ್ಕ ಲಾಭದಿಂದ ಅವರು ಸುಮಾರು ರೂ 338 ಶತಕೋಟಿ ಲಾಭ ಮಾಡಿ, ಸುಮಾರು ರೂ 1256 ಶತಕೋಟಿ ಒಡೆಯರಾಗಿದ್ದಾರೆ.

LEAVE A REPLY