ಬೆವರಿನ ಸ್ನಾನವೇ ಗತಿ

ನಗರದಲ್ಲಿ ಎಲ್ಲರ ಬಾಯಲ್ಲೂ ನೀರಿನದೇ ಜಪ. ಸುಮಾರು ಎರಡ್ಮೂರು ತಿಂಗಳಿನಿಂದ ನೀರಿಗಾಗಿ ಜನ ಪರದಾಟ ಪಡುತ್ತಿದ್ದಾರೆ. ಬೆಂಗಳೂರು, ಮೈಸೂರು ಸುತ್ತಮುತ್ತ ಹಲವಾರು ಕಡೆ ಗುಡುಗು ಸಿಡಿಲಿನ ಮೂರ್ನಾಲ್ಕು ಮಳೆ ಆಗಿದ್ದರೂ ದ ಕ ಜಿಲ್ಲೆಯಲ್ಲಿ ವರುಣ ಈ ಕಡೆ ತಲೆ ಎತ್ತಿ ನೋಡುವಂತೆ ಕಾಣುಸುತ್ತಿಲ್ಲ.
ಈಗಾಗಲೇ ನದಿಗಳು ಬತ್ತಿ ಹೋಗಿದೆ. ದಿನದಲ್ಲಿ ಮೂರ್ನಾಲ್ಕು ಬಾರಿ ಸ್ನಾನ ಮಾಡುವವರಿಗೆ ಈಗ ಬೆವರಿನ ಸ್ನಾನವೇ ಗತಿ. ಹೀಗಾಗಲು ನಮ್ಮ ಬುದ್ಧಿವಂತಿಕೆಯೇ ಕಾರಣವಿರಬಹುದು. ಮರ ಗಿಡಗಳನ್ನು ಕಡಿದು ಕಾಂಕ್ರೀಟ್ ನಿರ್ಮಿಸಲಾಗುತ್ತಿದೆ. ಇದರ ಫಲವನ್ನು ಈಗ ಅನುಭವಿಸುತ್ತಿದ್ದೇವೆ. ಇಷ್ಟಾದರೂ ನಮ್ಮ ಜನಕ್ಕೆ ಬುದ್ದಿ ಬರೋದಿಲ್ಲ

  • ಅವಿನಾಶ್ ಎಂ  ಮಂಗಳೂರು