ರಾಷ್ಟ್ರೀಯ ಉದ್ಯಾನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಬೆಂಗಳೂರು : ರಾಜ್ಯದ ಬಹುತೇಕ ಎಲ್ಲ ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಧಾಮಗಳಲ್ಲಿ ಈಗಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ. 2012ರಲ್ಲಿ ಇದೇ ಪರಿಸ್ಥಿತಿ ಉಂಟಾಗಿದ್ದಾಗ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿ ಕೊಳಕು ನೀರು ಕುಡಿದು 60ಕ್ಕೂ ಹೆಚ್ಚು ಆನೆಗಳು ಸಾವನ್ನಪ್ಪಿದ್ದವು.

ಕಳೆದ ವರ್ಷ ಕಡಿಮೆ ಮಳೆ ಬಿದ್ದಿರುವುದರಿಂದ ಈ ಬಾರಿ ಈಗಾಗಾಲೇ ಕೆಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಆರಂಭಗೊಂಡಿದೆ. ಸುಡುತ್ತಿರುವ ಬಿಸಿಲಿಗೆ ನೀರಿನ ಮೂಲಗಳು ಬತ್ತಿ ಹೋಗುತ್ತಿದ್ದು, ಪ್ರಾಣಿಗಳು ನೀರಿಗಾಗಿ ಅಲೆದಾಡುವಂತಾಗಿದೆ. ಅರಣ್ಯ ಪ್ರದೇಶಗಳಲ್ಲಿ ಹರಿದಾಡುವ ನೈಸರ್ಗಿಕ ನೀರಿನ ಮೂಲಗಳೂ ಬತ್ತಿ ಹೋಗಲಾರಂಭಿಸಿವೆ.

“ಬಂಡೀಪುರ, ನಾಗರಹೊಳೆ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಜೋಗಿಪಟ್ಟಿ ಮೀಸಲು ಅರಣ್ಯ, ಬಿಆರ್‍ಟಿ ಹಾಗೂ ಕಾವೇರಿ ವನ್ಯಧಾಮಗಳ ಸ್ಥಿತಿ ಗಂಭೀರವಾಗಿವೆ. ಜೋಗಿಮಟ್ಟಿಯ 100 ಚದರ ಕಿಮೀ ಅರಣ್ಯ ಪ್ರದೇಶದ ಯಾವೊಂದು ಮೂಲೆಯಲ್ಲೂ ಒಂದು ಹಣಿ ನೀರಿಲ್ಲದಂತಾಗಿದೆ” ಎಂದು ಪ್ರಧಾನ ಅರಣ್ಯ ಸಂಕ್ಷಣಾಧಿಕಾರಿ ಬಿ ಜಿ ಹೊಸಮಠ ತಿಳಿಸಿದರು.

“ಹಿಂದಿನ ಬರಗಾಲಕ್ಕೆ ಹೋಲಿಸಿದರೆ ಈ ಬಾರಿಯ ಸ್ಥಿತಿ ಇನ್ನೂ ಗಂಭೀರವಾಗಲಿದೆ. ಅರಣ್ಯ ಇಲಾಖೆಯು ಬಂಡೀಪುರ ಮತ್ತು ನಾಗರಹೊಳೆ ರಾಷ್‍ಟರೀಯ ಉದ್ಯಾನದ ಐದು ಕಡೆಗಳಲ್ಲಿ ಸೌರಶಕ್ತಿಯಿಂದ ನೇರೆತ್ತುವ ಬೋರುವೆಲ್ಲು ಕೊರೆದಿದೆ. ಈ ಕೊಳವೆಬಾವಿಗಳಲ್ಲಿ ಕೊನೆತನಕ ನೀರಿರುವ ಸಾಧ್ಯತೆ ಕ್ಷೀಣಿಸಿದೆ” ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.