ಮಠದಕಣಿ ಏರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆ

ಮಳೆಗಾಲದಲ್ಲಿ ಯಥೇಚ್ಛ ನೀರು ಇರುವಾಗಲೂ ಮಠದಕಣಿ ಪ್ರದೇಶದಲ್ಲಿ ಮಾತ್ರ ಎರಡು ದಿನಕ್ಕೊಮ್ಮೆಯೇ ಪಾಲಿಕೆಯವರು ನೀರು ಬಿಡುವುದು. ಆದರೆ ಮಂಗಳೂರು ನಗರದ ಹೃದಯಭಾಗದಲ್ಲಿ ಮಾತ್ರ ಬಹಳ ಮೊದಲಿನಿಂದಲೂ ಪ್ರತಿ ದಿನ ತಪ್ಪದೇ ನೀರು ಬಿಡಲಾಗುತ್ತದೆ.
ಸ್ಥಳೀಯ ಕಾರ್ಪೋರೇಟರ್ ಮನಗೆ ಪಾಲಿಕೆ ಉಚಿತ ಟ್ಯಾಂಕರ್ ನೀರು ಸರಬರಾಜು ಆಗುವುದರಿಂದ ಅವರಿಗೆ ಚಿಂತೆ ಇಲ್ಲ ಬಿಡಿ. ಆದರೆ ಈ ಪ್ರದೇಶದ ಉಳಿದ ಸಾಮಾನ್ಯ ನಾಗರಿಕರು ಸತತ ನೀರು ಇಲ್ಲದೆ ಹೇಗೆ ಅವಸ್ಥೆಪಡುತ್ತಿದ್ದಾರೆ ಎಂದು ಮೇಯರ್ ಅವರಿಗೆ ಅರ್ಥವಾಗುತ್ತದೆಯೇ

  • ಆರ್ ಭಾಸ್ಕರ್  ಮಠದಕಣಿ ಮಂಗಳೂರು