ಕವಾತ್ತಾರು ಗುಡ್ಡೆಯಂಗಡಿ ಬಳಿ ನೀರಿನ ಪೈಪು ಸೋರಿಕೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಳೆದ ಕೆಲ ದಿನಗಳಿಂದ ಕಿನ್ನಿಗೋಳಿ ಸಮೀಪದ ಬಳಕುಂಜೆ ಗ್ರಾಮಪಂಚಾಯತಿ ಮತ್ತು ಅತಿಕಾರಿಬೆಟ್ಟು ಗ್ರಾಮಪಂಚಾಯತಿಯ ಗಡಿಪ್ರದೇಶವಾದ ಕವಾತ್ತಾರು ಗುಡ್ಡೆಯಂಗಡಿ ಬಳಿ ಕುಡಿಯುವ ನೀರಿನ ಪೈಪು ಸೋರಿಕೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಎರಡು ಪಂಚಾಯತಿಯ ಗಮನಕ್ಕೆ ತಂದರೂ ಇನ್ನು ಸರಿಯಾಗಿಲ್ಲ.

ಎರಡು ಪಂಚಾಯತಿಗಳು ಪೈಪು ತಮ್ಮದಲ್ಲ ಎಂದು ವಾದಿಸುತ್ತಿದ್ದು ಕುಡಿಯುವ ನೀರು ಬಹತೇಕ ಸೋರಿಕೆಯಾಗಿ ರಸ್ತೆ ಬದಿ ಕೆರೆ ವಾತಾವರಣ ಸೃಷ್ಠಿಯಾಗಿದೆ.

ಅತಿಕಾರಿಬೆಟ್ಟು ಹಾಗೂ ಬಳಕುಂಜೆ ಗ್ರಾಮಗಳಿಗೆ ಕೊಲ್ಲೂರುಪದವು ಬಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೈಪಿನ ಮೂಲಕ ಬರುತ್ತಿದ್ದು ನೀರು ಸೋರಿಕೆ ಬಗ್ಗೆ ಪಂಚಾಯತಿಗಳು ನಿಲ್ರ್ಯಕ್ಷ ತಾಳಿವೆ.

ಎರಡೂ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿರುವ ಸಮಯದಲ್ಲಿ ನೀರು ಸೋರಿಕೆ ಬಗ್ಗೆ ಪಂಚಾಯತಿ ಅಧ್ಯಕ್ಷರು ಮುಂಜಾಗರೂಕತೆ ವಹಿಸಿ ದುರಸ್ತಿಪಡಿಸಲು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.