ಸರಕಾರದ ಸಾಧನೆಗೆ ಜಾಹೀರಾತು ಬೇಡ

ರಾಜ್ಯ ಸರಕಾರ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸದೆ ನಿದ್ದೆ ಮಾಡುತ್ತಿತ್ತು ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರ ಮತ ಬುಟ್ಟಿಗೆ ಹಾಕಿಕೊಳ್ಳಲು ಜನಸಾಮಾನ್ಯರ ಹಣ ರಾಜಕೀಯ ಪ್ರಚಾರಕ್ಕೆ ಬಳಸುತ್ತಿದೆ ಬಸ್ ಸ್ಟ್ಯಾಂಡುಗಳಲ್ಲಿ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳು, ಪತ್ರಿಕೆಗಳಲ್ಲಿ ಜಾಹೀರಾತುಗಳು ಡಿಜಿಟಲ್ ಜಾಹೀರಾತುಗಳು ಇತ್ಯಾದಿಯಾಗಿ ಎಲ್ಲೆಡೆ ಜಾಹೀರಾತುಗಳು. ರಾಜ್ಯ ಸರಕಾರ ಜನರನ್ನು ಈಗಾಗಲೇ ಸಾಲದ ಶೂಲಕ್ಕೆ ಏರಿಸಿದ್ದು ಇನ್ನಷ್ಟು ಸಾಲದ ಹೊರೆ ಹೊರಿಸಲು ಸಿದ್ಧವಾಗಿರುವುದು ವಿಷಾದನೀಯ ಈ ವರ್ಷಾಂತ್ಯಕ್ಕೆ ಎರಡು ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ಜನರ ಮೇಲೆ ಬೀಳುವ ನಿರೀಕ್ಷೆಯಿದೆ ಆದರೆ ರಾಜ್ಯದ ಪ್ರತಿ ವ್ಯಕ್ತಿಯ ಮೇಲೆ ರೂಪಾಯಿ 38ರಿಂದ 40 ಸಾವಿರದ ಸಾಲದ ಹೊರೆ ಖಂಡಿತ ರೈತರ ಸಾಲಮನ್ನಾ ಮತ್ತು ಅಂಗನವಾಡಿ ಕಾರ್ಯಕರ್ತರ ಸಂಬಳ ಹೆಚ್ಚಳ ಪರವಾಗಿಲ್ಲ ಆದರೆ 2018 ಚುನಾವಣೆ ಪ್ರಚಾರಕ್ಕೆ ಕೋಟಿ ಕೋಟಿ ಹಣ ಉಪಯೋಗಿಸಿಕೊಳ್ಳುತ್ತಿರುವುದು ನ್ಯಾಯವಲ್ಲ ಸರಕಾರದ ಸಾಧನೆಗೆ ಪ್ರಚಾರ ಅಗತ್ಯವಿಲ್ಲ. ಪ್ರಚಾರದ ಬದಲು ರಾಜ್ಯದ ವಿಕಾಸಕ್ಕೆ ಹಣ ಸದ್ಭಳಕೆ ಮಾಡಿದಲ್ಲಿ ಜನರ ವಿಶ್ವಾಸವನ್ನು ಗಳಿಸಬಹುದು

  • ಎಂ ಮನೋಹರ  ಜೋಡುಕಟ್ಟೆ

LEAVE A REPLY