ತಾಯಿ ಪೋಷಿಸದ ಇಬ್ಬರು ಮಕ್ಕಳ ಬಂಧನಕ್ಕೆ ವಾರಂಟ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ತಾಯಿಯನ್ನು ಪೋಷಿಸದ ಮತ್ತು ಸಂರಕ್ಷಿಸದ ಇಬ್ಬರು ಮಕ್ಕಳನ್ನು ಬಂಧಿಸುವಂತೆ ಕಾರವಾರದ ಉಪವಿಭಾಗೀಯ ದಂಡಾಧಿಕಾರಿ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ.

ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಸಮೀಪದ ನಿವಾಸಿ ಸಫುರಾಜೀ ಅಬ್ಬಾಸ್ ಖಾನ್ ವೃದ್ಧರಾಗಿದ್ದು, 6 ಜನ ಮಕ್ಕಳನ್ನು ಹೊಂದಿದ್ದಾರೆ. ಆದರೆ ಅವರ ವೃದ್ಧಾಪ್ಯದ ಅವಧಿಯಲ್ಲಿ ಆರರ ಪೈಕಿ ಇಬ್ಬರು ಮಕ್ಕಳು ಆಕೆಯನ್ನು ನೋಡಿಕೊಳ್ಳುವ ವೆಚ್ಚ ನೀಡದೇ ನಿರ್ಲಕ್ಷಿಸಿದ್ದರು. ಹಾಗಾಗಿ ಅವರು ಹಿರಿಯ ನಾಗರಿಕರ ಸಹಾಯವಾಣಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾಚರಣೆ ನಡೆಸಿದ ಉಪವಿಭಾಗೀಯ ದಂಡಾಧಿಕಾರಿ ಮಕ್ಕಳಿಬ್ಬರು ತಾಯಿಗೆ ಮಾಸಿಕ ತಲಾ 5,000 ರೂ ಪೆÇೀಷಣೆ ಹಾಗೂ ಸಂರಕ್ಷಣಾ ವೆಚ್ಚ ನೀಡಬೇಕು ಎಂದು 2016ರ ಡಿಸೆಂಬರ್ 20ರಂದು ಆದೇಶ ನೀಡಿದ್ದರು. ಆದರೆ, ಆದೇಶ ಪಾಲಿಸದ ಸದ್ಯ ಬೆಂಗಳೂರಿನ ನಿವಾಸಿಯಾದ ಫಜಲ್ ಅಹ್ಮದ್ ಅಬ್ಬಾಸ್ ಖಾನ್ ಹಾಗೂ ನಗರದ ಕೆ ಎಚ್ ಬಿ ಕಾಲೊನಿಯ ನಿವಾಸಿ ಶಬ್ಬೀರ ಅಹ್ಮದ್ ಅಬ್ಬಾಸ್ ಖಾನ್ ವಿರುದ್ಧ ಕಾರವಾರದ ಉಪವಿಭಾಗೀಯ ದಂಡಾಧಿಕಾರಿ ನ್ಯಾಯಾಲಯ ಬಂಧನದ ವಾರಂಟ್ ಜಾರಿ ಮಾಡಿ ಪೆÇಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದೆ. ಈ ಮಕ್ಕಳಿಬ್ಬರು ತಲಾ 30,000 ರೂ ನೀಡಬೇಕಾಗಿರುವುದರಿಂದ ಉಪವಿಭಾಗೀಯ ದಂಡಾಧಿಕಾರಿ ಶಿವಾನಂದ ಕರಾಳೆ ಈ ಆದೇಶ ಹೊರಡಿಸಿದ್ದಾರೆ. ಸದ್ಯ ಸಫುರಾಜೀ ಅವರು ಕೋಡಿಬಾಗದ ತನ್ನ ಇನ್ನೊಬ್ಬ ಮಗನ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.