ವಾರಂಟ್ ಆರೋಪಿಗಳಿಬ್ಬರ ಬಂಧನ

ಸಾಂದರ್ಭಿಕ ಚಿತ್ರ

ಪುತ್ತೂರು : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಮಲ್ಲೂರು ನಿವಾಸಿ ಹನೀಫ್ ಎಂಬಾತ ಪ್ರವೀಣ್ ಕ್ಯಾಪಿಟಲ್ ಫೈನಾನ್ಸಿ ಚೆಕ್ ನೀಡಿದ್ದು, ಅದು ಬೌನ್ಸ್ ಆಗಿತ್ತು. ಆರೋಪಿಯ ವಿರುದ್ಧ ಮಾಲಕರು ದೂರು ನೀಡಿದ್ದರು. ಆತ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಇನ್ನೊಂದು ಪ್ರಕರಣದಲ್ಲಿ ಪರ್ಲಡ್ಕದ ಮಹೇಶ್ ಎಂಬಾತ ಹಣದ ವಿಷಯದಲ್ಲಿ ಚೆಕ್ ನೀಡಿದ್ದು, ಅದು ಬೌನ್ಸ್ ಆಗಿತ್ತು. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.