ಪಾಲಕರನ್ನು ನಿರ್ಲಕ್ಷಿಸುವ ನೌಕರರ ವೇತನಕ್ಕೆ ಕತ್ತರಿ !

ಗುವಾಹಟಿ : ಅಶಕ್ತ ಪಾಲಕರನ್ನು ನಿರ್ಲಕ್ಷ್ಯಿಸುವ ಸರ್ಕಾರಿ ಉದ್ಯೋಗದಲ್ಲಿರುವ ಅವರ ಮಕ್ಕಳು ಇನ್ನು ಮುಂದೆ ತಮ್ಮ ಮಾಸಿಕ ವೇತನದಲ್ಲಿ ಶೇ 10ರಷ್ಟು ಮೊತ್ತ ಕಳೆದುಕೊಳ್ಳಲಿದ್ದಾರೆ ! ಈ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರ ದೇಶದಲ್ಲೇ ಪ್ರಥಮ ಎಂಬಂತಹ ಕಾನೂನು ಜಾರಿಗೊಳಿಸಲಿದೆ. ವೇತನದಲ್ಲಿ ಕಡಿತ ಮಾಡಲಾದ ಮೊತ್ತವನ್ನು ಉದ್ಯೋಗಿಗಳ ಪಾಲಕರಿಗೆ ನೀಡಲಾಗುವುದು. ಪಾಲಕರ ಬಗ್ಗೆ ಮಕ್ಕಳು ಕಾಳಜಿ ಹರಿಸಲೆಂದು ಈ ಕಾನೂನು ಜಾರಿಗೊಳಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ಹೇಳಿವೆ.