ಆಲ್ಫೋನ್ಸ್ ಅಭಿನಂದಿಸಿದ ಸೀಎಂಗೆ ವಿ ಎಸ್ ಟೀಕೆ

ತಿರುವನಂತಪುರಂ : ಕೇಂದ್ರ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಲ್ಫೋನ್ಸಗೆ ಕೇರಳ ಸೀಎಂ ಪಿಣಯಾಯಿ ವಿಜಯನ್ ಅಭಿನಂದಿಸಿದ ಕ್ರಮಕ್ಕೆ ಹಿರಿಯ ಸಿಪಿಎಂ ಮುಖಂಡ ಅಚ್ಯುತಾನಂದನ್ ವ್ಯಂಗ್ಯ ಮಾಡಿದ್ದಾರೆ.

“ಆಲ್ಫೋನ್ಸ್ ಅಭಿನಂದನಾರ್ಹರಲ್ಲ. ಅವರ ಕೆಲಸ ರಾಜಕೀಯವು ಕ್ಷಯಕ್ಕೆ ಸಂಕೇತವಾಗಿದೆ. ಅವರು ಫ್ಯಾಸಿಸ್ಟ್ ಪಡೆಗಳಿಂದ ಉತ್ತಮ ಸವಲತ್ತು ಪಡೆಯಲು ಸಂಪುಟ ಸೇರಿಕೊಂಡಿದ್ದಾರೆ. ರಾಜಕೀಯಕ್ಕಿಂತಲೂ ಹೆಚ್ಚಾಗಿ ಅವರು ವೈಯಕ್ತಿಕ ಲಾಭವನ್ನೇ ಗುರಿಯಾಗಿಸಿದ್ದಾರೆ” ಎಂದು ಅಚ್ಯುತಾನಂದನ್ ಟೀಕಿಸಿದರು.“ವಯೋವೃದ್ಧ ನಾಯಕ ಅಚ್ಯುತಾನಂದನಗೆ ವಯಸ್ಸಿನ ದೋಷ ಕಾಡುತ್ತಿದ್ದು, ಏನೇನೋ ಮಾತನಾಡುತ್ತಿದ್ದಾರೆ” ಎಂದು ಆಲ್ಫೋನ್ಸ್ ಪ್ರತಿಕ್ರಿಯಿಸಿದ್ದಾರೆ. ಅಚ್ಯುತಾನಂದನ್ ಸೀಎಂ ಆಗಿದ್ದಾಗ ಇವರು (ಆಲ್ಫೋನ್ಸ್) ಎಲ್ ಡಿ ಎಫ್ ಬೆಂಬಲಿತ ಶಾಸಕರಾಗಿದ್ದರು.