ವಿಟ್ಲ ಪಟ್ಟಣ ಪಂಚಾಯತ್ ಹೀಗೇಕೆ

ಗ್ರಾಮ ಪಂಚಾಯತನಿಂದ ಪಟ್ಟಣ ಪಂಚಾಯತ್ ಆಗಿ ಬಡ್ತಿ ಹೊಂದಿದ ವಿಟ್ಲ ಪಟ್ಟಣ ಪಂಚಾಯತ್ ಒಳಗಿನ ಸಿಬ್ಬಂದಿಗಳ ಆಮೆ ನಡಿಗೆಯಿಂದ ನಾಗರಿಕರು ತುಂಬಾ ತೊಂದರೆಗೀಡಾಗಿದ್ದಾರೆ. ಒಂದು ಸಣ್ಣ ಕೆಲಸಕ್ಕೂ ನಾಗರೀಕರನ್ನು ಪಂಚಾಯತಗೆ ಬರುವಂತೆ ಮಾಡುತ್ತಾರೆ. ಸಹಿ ಆಗಲಿಲ್ಲ, ಸೀಲ್ ಆಗಲಿಲ್ಲ, ಅಧ್ಯಕ್ಷರು ಇಲ್ಲ, ಪಿಡಿಓ ಇಲ್ಲ, ಕಾರ್ಯ ನಿರ್ವಾಕ ಅಧಿಕಾರಿ ಇಲ್ಲ, ಕಂಪ್ಯೂಟರ್ ಸರಿ ಇಲ್ಲ ಎಂದು ನಾಗರಿಕರನ್ನು ಸತಾಯಿಸುತ್ತಾರೆ. ಒಂದು ಕೆಲಸಕ್ಕಾಗಿ ನಾಗರಿಕರಿಗೆ ಚಿತ್ರಹಿಂಸೆ ನೀಡುವ ಸಿಬ್ಬಂದಿಗಳ ಈ ಉದಾಸೀನ ಅಧ್ಯಕ್ಷರ ಗಮನಕ್ಕೆ ಬಂದಿಲ್ಲ ಎಂದು ನಮ್ಮ ಅನಿಸಿಕೆ. ಅವರು ಈ ಸಮಸ್ಯೆಯನ್ನು ಸರಿಪಡಿಸಲಿ

  • ನೊಂದ ನಾಗರಿಕರು
    ವಿಟ್ಲ ಪಟ್ಟಣ ಪಂಚಾಯತ್