ಅನುಷ್ಕಾಗೆ ವಿರಾಟ್ ಸ್ವೀಟ್ ಟ್ವೀಟ್

ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಈಗ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಂದ್ರೆ ಬಹಳ ಕ್ರೇಜ್. ಅವನ ಜೊತೆ ಗರ್ಲ್‍ಫ್ರೆಂಡ್ ಅನುಷ್ಕಾ ಇದ್ದರಂತೂ ಅದು ಅಭಿಮಾನಿಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗುತ್ತಿದೆ. ಮೊನ್ನೆ ಪ್ರೇಮಿಗಳ ದಿನ ವಿರಾಟ್ ತನ್ನ ಪ್ರೇಯಸಿ ಅನುಷ್ಕಾ ಶರ್ಮಾಗೆ ಸಾಮಾಜಿಕ ತಾಣದಲ್ಲಿ ಒಂದು ಮಧುರವಾದ ಸಂದೇಶ ಕಳುಹಿಸಿದ್ದಾನೆ.

virushka anushka-sharma-virat-kohli

ಪ್ರೇಮಿಗಳ ದಿನವನ್ನು ಆನಂದವಾಗಿ ಕಳೆದೆವೆಂದು ತಿಳಿಸುತ್ತಾ… ಪಾರ್ಕ್‍ನಲ್ಲಿ ಅನುಷ್ಕಾ ಜತೆ ಸೆಲ್ಫಿ ತೆಗೆದುಕೊಂಡ ಫೆÇೀಟೋವನ್ನು ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ. `ಪ್ರತಿ ದಿನ ಪ್ರೇಮಿಗಳ ದಿನಾಚರಣೆ…ನೀನು ಬಯಸಿದರೆ … ಪ್ರತಿ ದಿನ ಹಾಗೇ ಇರುವಂತೆ ಮಾಡಿದೆ ನೀನು’ ಎಂದು ಸ್ವೀಟ್ ಟ್ವೀಟ್ ಮಾಡಿದ್ದಾನೆ ವಿರಾಟ್.

ಆದರೇನು, ಅದ್ಯಾಕೋ ಏನೋ ಗೊತ್ತಾಗಿಲ್ಲ ಈ ಟ್ವೀಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಅದನ್ನು ಟ್ವಿಟ್ಟರಿನಿಂದಲೇ ಡಿಲೀಟ್ ಮಾಡಿದ್ದಾನೆ. ಆದರೆ ಅಷ್ಟರೊಳಗೆ ಅಭಿಮಾನಿಗಳು ಅದಕ್ಕೆ ಲೈಕ್ಸ್, ರೀಟ್ವೀಟ್ ಮಾಡಿ ಆ ಫೆÇೀಟೋವನ್ನು ತಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಂಡಾಗಿತ್ತು.