ಮುಂದಿನ ವಾರವೇ ಇಟಲಿಯಲ್ಲಿ ವಿರಾಟ್-ಅನುಷ್ಕಾ ಮದುವೆ !

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಕಳೆದ ಕೆಲವು ವರ್ಷಗಳಿಂದ ರಿಲೇಶನ್ಶಿಪ್ಪಿನಲ್ಲಿರುವುದು ಎಲ್ಲರಿಗೂ ಗೊತ್ತಿರುವ ಸುದ್ದಿಯೇ. ಈಗ ಕೆಲಸಮಯದಿಂ ಈ ಜೋಡಿ ಬಹಿರಂಗವಾಗಿಯೇ ಜೊತೆಯಲ್ಲಿ ಓಡಾಡುತ್ತಿದ್ದು ಇದೀಗ ಅವರು ಮುಂದಿನ ವಾರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಯೊಂದು ಬಂದಿದೆ.  ಮೂಲದ ಪ್ರಕಾರ ಇವರ ಮದುವೆ  ಇಟಲಿಯಲ್ಲಿ ಡಿಸೆಂಬರ್ 9, 10, 11

ಹಾಗೂ 12ರಂದು ನಡೆಯಲಿದ್ದು ಇದೀಗ ಅವರು ಇಟಲಿಗೆ ಪ್ರಯಾಣ ಹೊರಡಲಿದ್ದಾರೆ. ಈಗಾಗಲೇ ಅವರ ಕುಟುಂಬ ಹಾಗೂ ಆಪ್ತರು ಇಟಲಿಗೆ ಟಿಕೆಟ್ ಬುಕ್ ಮಾಡಿದ್ದಾರಂತೆ. ಡಿಸೆಂಬರ್ 21ರಂದು ಮುಂಬೈನಲ್ಲಿ ರಿಸೆಪ್ಷನ್ ಇಟ್ಟುಕೊಂಡಿದ್ದಾರಂತೆ `ವಿರೂಷ್ಕಾ’.

ಈಗಾಗಲೇ ವಿರಾಟ್ ಕ್ರಿಕೆಟ್ಟಿನಿಂದ ರಜಾ ತೆಗೆದುಕೊಂಡಿದ್ದು ಆಗಲೇ ಅವರ ಮದುವೆ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಅದಲ್ಲದೇ ಕಳೆದ ವರ್ಷ ಡಿಸೆಂಬರಿನಲ್ಲಿಯೂ ಅವರ ಮದುವೆ ಬಗ್ಗೆ ಸುದ್ದಿಯಾಗಿತ್ತು. ಈಗಲೂ ಅನುಷ್ಕಾಳೇ ಆಗಲೀ ವಿರಾಟ್ ಆಗಲೀ ಮದುವೆ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಲ್ಲ.