ದಲಿತ ವಿದ್ಯಾರ್ಥಿ ಹತ್ಯೆ : ಅಲಹಾಬಾದಿನಲ್ಲಿ ಹಿಂಸಾಚಾರ

ಸಾಂದರ್ಭಿಕ ಚಿತ್ರ

ಲಕ್ನೋ : ಅಲಹಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ದಿಲೀಪ್ ಸರೋಜ್ ಎಂಬಾತನನ್ನು ನಾಲ್ಕು ಮಂದಿ ರೆಸ್ಟಾರೆಂಟ್ ಒಂದರಲ್ಲಿ ಹೊಡೆದು ಸಾಯಿಸಿದ ಘಟನೆಯ ನಂತರ ನಗರದಲ್ಲಿ ಸೋಮವಾರ ಹಿಂಸಾಚಾರ ನಡೆದಿದೆ. ಉದ್ರಿಕ್ತ ವಿದ್ಯಾರ್ಥಿಗಳು ಬಸ್ಸೊಂದಕ್ಕೆ ಬೆಂಕಿ ಹಚ್ಚಿದ್ದಾರಲ್ಲದೆ ಜಿಲ್ಲಾ  ಮ್ಯಾಜಿಸ್ಟ್ರೇಟ್  ಸುಹಾಸ್ ಎಲ್ ವೈ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದಾರೆ. ಸಮಾಜವಾದಿ ಯುವಜನ್ ಸಭಾ ಹಾಗೂ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ ಸದಸ್ಯರು ನಗರದಲ್ಲಿ ಪ್ರತಿಭಟನಾ ಮೆರವಣಿಗೆಯೊಂದನ್ನೂ ನಡೆಸಿ ಸರಕಾರ ವಿರೋಧಿ ಹಾಗೂ ಪೊಲೀಸ್ ವಿರೋಧಿ ಘೋಷಣೆಗಳನ್ನು ಕೂಗಿದರು. ಮೃತ ಸರೋಜ್ ಎರಡನೇ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದ. ಆತನನ್ನು ಹೊಡೆದು ಸಾಯಿಸುವ ದೃಶ್ಯ ಸೀಸಿಟಿವಿಯಲ್ಲಿ ದಾಖಲಾಗಿದ್ದು ಈಗಾಗಲೇ ವೈರಲ್ ಆಗಿದೆ.

LEAVE A REPLY