ಬಿಜೆಪಿ ಪಾದಯಾತ್ರೆಗೆ ಕಲ್ಲು ತೂರಾಟ

ವ್ಯಾಪಕ ಹಿಂಸಾಚಾರ, ಪೊಲೀಸರಿಂದ
ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಮೇಲೆ ಕಲ್ಲೆಸೆತ ನಡೆದ ಹಿನ್ನಲೆಯಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದು, ಪರಿಸ್ಥಿತಿ ನಿಯಂತ್ರಿಸಲು ಪೆÇಲೀಸರು ಅಶ್ರುವಾಯು ಬಳಸಿದರು. ಘಟನೆಯಲ್ಲಿ ಸುಮಾರು 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಒಂದು ಬಸ್ಸಿಗೆ ಹಾನಿಯಾಗಿದೆ.
ಸಿಪಿಎಂನಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಹಿಂಸಾಚಾರ ಮತ್ತು ಅಸಹಿಷ್ಣುತೆ ವಿರೋಧಿಸಿ ಬಿಜೆಪಿ ಜಿಲ್ಲಾ ಸಮಿತಿ ಚೆರ್ವತ್ತೂರಿನಿಂದ ಚಿಮೇನಿ ತನಕ ಪಾದಯಾತ್ರೆ ಹಮ್ಮಿಕೊಂಡಿತ್ತು. ಜಿಲ್ಲಾಧ್ಯಕ್ಷ ಕೆ ಶ್ರೀಕಾಂತ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪಾದಯಾತ್ರೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ ಪಿ ಶ್ರೀಶನ್ ಪಾದಯಾತ್ರೆಗೆ ಚಾಲನೆ ನೀಡಿದ್ದರು.
ಪಾದಯಾತ್ರೆ ಚಿಮೇನಿ ತಲುಪುತ್ತಿದ್ದಂತೆ ಕಲ್ಲೆಸೆತ ಶುರುವಾಗಿದೆ. ಅಲ್ಲದೆ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಹೊಡೆದಾಟ ಪ್ರಾರಂಭಗೊಂಡಿದೆ.
ಹಿಂಸಾಚಾರ ತಡೆಯಲು ಪೆÇಲೀಸರು ಲಾಠಿ ಪ್ರಹಾರ ನಡೆಸಿದರು. ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನಲೆಯಲ್ಲಿ ಅಶ್ರುವಾಯು ಸಿಡಿಸಿದರು. ಇದರಿಂದ ಹಲವು ಮಂದಿ ಗಾಯಗೊಂಡರು.
ಯುವ ಮೋರ್ಚಾ ಕಾಞಂಗಾಡ್ ಮಂಡಲ ಅಧ್ಯಕ್ಷ ಶ್ರೀಜಿತ್ (32), ಸೇರಿದಂತೆ ಐದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಮರಳಿ ತೆರಳುತ್ತಿದ್ದ ಬಸ್ಸಿಗೂ ಕಲ್ಲೆಸೆದು ಹಾನಿಗೊಳಿಸಲಾಗಿದೆ.
ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದ್ದು, ಪೆÇಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.
ಡಿ 21ರಂದು ಬಿಜೆಪಿ ಪರಿಶಿಷ್ಟ ಜಾತಿ ಯುವ ಮೋರ್ಚಾ ಆಯೋಜಿಸಿದ್ದ ಸಮಾವೇಶದ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು. ಇದನ್ನು ಖಂಡಿಸಿ ಸೋಮವಾರ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದು, ಈ ಸಂದರ್ಭದಲ್ಲಿ ಪೆÇಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿತ್ತು.
ಘಟನೆಗೆ ಸಂಬಂಧಿಸಿ ಪೊಲೀಸರು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ ಸುರೇಂದ್ರನ್, ವಿಲ್ಸನ್ ತಿಲ್ಲಂಗೇರಿ ಮೊದಲಾದವರನ್ನು ಬಂಧಿಸಿದರು. ಬಂಧಿತರನ್ನು ಬಿಡುಗಡೆಗೊಳಿಸುವ0ತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪೆÇಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

ಇಂದು ಹರತಾಳ
ಕಲ್ಲೆಸೆತ ಹಾಗೂ ನಾಯಕರ ಬಂಧನ ವಿರೋಧಿಸಿ ಇಂದು ಕಾಸರಗೋಡು ಜಿಲ್ಲೆಯಲ್ಲಿ ಬಿಜೆಪಿ ಹರತಾಳಕ್ಕೆ ಕರೆ ನೀಡಿದೆ. ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಹರತಾಳ ನಡೆಯಲಿದ್ದು ಹಾಲು, ಪತ್ರಿಕೆ, ಆಸ್ಪತ್ರೆ, ಅಯ್ಯಪ್ಪ ಭಕ್ತರ ವಾಹನಗಳಿಗೆ ಹರತಾಳದಿಂದ ವಿನಾಯಿತಿ ನೀಡಲಾಗಿದೆ.