ಹರತಾಳದಲ್ಲಿ ಕೆಲವೆಡೆ ಹಿಂಸಾಚಾರ

ಹರತಾಳನಿರತರು ಕಾರನ್ನು ತಡೆಯುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸಿಪಿಎಂ ದೌರ್ಜನ್ಯದ ವಿರುದ್ಧ ಬಿಜೆಪಿ ತೃಕ್ಕರಿಪುರ ವಿಧಾನಸಭಾ ಕ್ಷೇತ್ರದ ಸಮಿತಿ ನೇತೃತ್ವದಲ್ಲಿ ಚೆರ್ವತ್ತೂರಿನಿಂದ ಆರಂಭಿಸಿದ ಮೆರವಣಿಗೆ ಮೇಲೆ ನಡೆದ ಕಲ್ಲೆಸೆತಕ್ಕೆ ಸಂಬಂಧಿಸಿ ಪೆÇಲೀಸರು ಹಿಂಸಾಚಾರಕ್ಕೆ ಬೆಂಬಲ ನೀಡುವುದಾಗಿ ಆರೋಪಿಸಿ ಬಿಜೆಪಿ ಜಿಲ್ಲಾ ಸಮಿತಿ ಕಾಸರಗೋಡು ಜಿಲ್ಲೆಯಲ್ಲಿ ಕರೆನೀಡಿದ ಹರತಾಳ ಹಲವೆಡೆ ಹಿಂಸಾಚಾರಕ್ಕೆ ತಿರುಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೆÇಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

ಲಾರಿ ಚಾಲಕರು ವಾಹನದಡಿ ಆಹಾರ ತಯಾರಿಸಿಕೊಂಡರು
ಲಾರಿ ಚಾಲಕರು ವಾಹನದಡಿ ಆಹಾರ ತಯಾರಿಸಿಕೊಂಡರು

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಹರತಾಳ ನಡೆದಿದೆ. ಕುಂಬಳೆ, ಉಪ್ಪಳ, ಮಂಜೇಶ್ವರ ಪ್ರದೇಶಗಳಲ್ಲಿ ಹರತಾಳ ಬಹುತೇಕ ಪೂರ್ಣಗೊಂಡಿದೆ. ಕೆಲ ಬೆರಳೆಣಿಕೆಯ ಬಸ್ಸುಗಳು ಮಾತ್ರ ರಸ್ತೆಯಲ್ಲಿದ್ದವು. ವಾಹನಗಳ ಸೌಕರ್ಯ ಇಲ್ಲದ ಕಾರಣ ಜಿಲ್ಲೆಯ ಶಾಲಾ ಕಾಲೇಜುಗಳು ಮುಚ್ಚಿಕೊಂಡಿತ್ತು. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ಸುಗಳಿಲ್ಲದೆ ಪರದಾಡುತ್ತಿರುವ ದೃಶ್ಯ ಕಂಡುಬಂತು. ಕೆಲವೆಡೆ ಬಂದ್ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಲವು ವಾಹನಗಳ ಮೇಲೆ ಕಲ್ಲೆಸೆತ ಉಂಟಾಗಿದೆ. ರಸ್ತೆಗಿಳಿದ ವಾಹನಗಳನ್ನು ಬಲವಂತವಾಗಿ ತಡೆಯಲಾಗಿದೆ. ಸಿಪಿಎಂ ಅಧೀನತೆಯಲ್ಲಿರುವ ಬ್ಯಾಂಕುಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ.

ಪತ್ರಿಕಾ ವಾಹನ, ಶಬರಿಮಲೆ ವಾಹನ, ಆಸ್ಪತ್ರೆಗೆ ಸಾಗುವ ವಾಹನಗಳಿಗೆ ಹರತಾಳದಿಂದ ವಿನಾಯಿತಿ ನೀಡಲಾಗಿತ್ತು.