ವಿಕ್ರಮ್ ಭರ್ಜರಿ ಫೆÇೀಟೋಶೂಟ್

ರವಿಚಂದ್ರನ್ ಎರಡನೇ ಮಗ ವಿಕ್ರಮ್ ನಾಯಕನಾಗಿ ನಟಿಸುತ್ತಿರುವ `ನವೆಂಬರ್‍ನಲ್ಲಿ ನಾನು ಅವಳು’ ಚಿತ್ರ ಸೆಟ್ಟೇರುವ ಮೊದಲೇ ಭಾರೀ ಹೈಪ್‍ಪಡೆಯುತ್ತಿದೆ. ಮೂಲಗಳ ಪ್ರಕಾರ ಚಿತ್ರದ ಟೀಸರ್ ಆಗಸ್ಟ್ 16ರಂದು ಅಂದರೆ ವಿಕ್ರಮ್ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ. ಅದಲ್ಲದೇ ಚಿತ್ರಕ್ಕಾಗಿ ಭರ್ಜರಿ ಫೆÇೀಟೋ ಶೂಟ್ ಕೂಡಾ ಆಗಿದ್ದು, ವಿಕ್ರಮ್ ಫಸ್ಟ್ ಲುಕ್ ಈಗ ಬಿಡುಗಡೆಯಾಗಿದೆ.

ಈ ಫೆÇೀಟೋಶೂಟ್ ಜೊತೆ ಟೀಸರಿಗಾಗಿ ಕೆಲವು ಸ್ಟಂಟ್ ಮತ್ತು ನೃತ್ಯದ ದೃಶ್ಯಗಳನ್ನು ಕೂಡಾ ತೆಗೆದಿದ್ದಾರೆ. ಇದರಲ್ಲಿ ವಿಕ್ರಮ್ ಜೊತೆ ಕೆಲವು ಡ್ಯಾನ್ಸರ್ಸ್ ಮತ್ತು ಫೈಟರ್ಸ್ ಕೂಡಾ ಭಾಗವಹಿಸಿದ್ದರು. ಈ ಫೊಟೋಶೂಟ್ ಹಾಗೂ ಟೀಸರ್ ಚಿತ್ರೀಕರಣ ನಿರ್ದೇಶಕ ನಾಗಶೇಖರ್, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮತ್ತು ಸಾಹಸ ನಿರ್ದೇಶಕ ರವಿವರ್ಮರ ನೇತೃತ್ವದಲ್ಲಿ ನಡೆದಿದ್ದು ಇದಕ್ಕೇ ಸುಮಾರು 50 ಲಕ್ಷ ರೂ ಖರ್ಚಾಗಿದೆ ಎನ್ನಲಾಗಿದೆ.

ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ನಿರ್ಮಾಣಗೊಳ್ಳುವ ಈ ಚಿತ್ರವನ್ನು ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ತಮಿಳಿನ ಶರತ್‍ಕುಮಾರ್, ನಾಜರ್, ಸುಹಾಸಿನಿ ಮಣಿರತ್ನಂ, ಕನ್ನಡದ ಸಾಧು ಕೋಕಿಲ, ಚಿಕ್ಕಣ್ಣ, ತೆಲುಗಿನ ಅಜಯ್ ಮತ್ತು ಸಪ್ತಗಿರಿ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ವಿಕ್ರಮ್ ನಾಯಕಿಯಾಗಿ ಈ ಮೊದಲು ಅಕ್ಷರಾ ಹಾಸನ್ ಹೆಸರು ಕೇಳಿಬಂದಿತ್ತಾದರೂ ಇದೀಗ `ಪ್ರೇಮಂ’ ಖ್ಯಾತಿಯ ಸಾಯಿ ಪಲ್ಲವಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

`ನವೆಂಬರ್‍ನಲ್ಲಿ ನಾನು ಅವಳು’ ಚಿತ್ರದ ಮುಹೂರ್ತ ಮುಂದಿನ ತಿಂಗಳು ನಡೆಯಲಿದ್ದು ಚಿತ್ರೀಕರಣ ಕರ್ನಾಟಕ ಮತ್ತು ತಮಿಳು ನಾಡಿನ ಸುತ್ತಮುತ್ತ ನಡೆಯಲಿದೆ. ಅದಲ್ಲದೇ ಕೆಲವೊಂದು ಭಾಗವನ್ನು ಸ್ಕಾಟ್‍ಲೆಂಡ್, ಇಂಗ್ಲೆಂಡ್ ಮತ್ತು ಐರ್ಲೆಂಡಿನಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು.