ಇಂದು ವಿಜಯ್ ಮಲ್ಯ ಐಷಾರಾಮಿ ಜೆಟ್ ಹರಾಜು

ಮುಂಬೈ : ಸುಮಾರು 535 ಕೋಟಿ ರೂ ಬಾಕಿ ಉಳಿಸಿರುವ ಕಿಂಗ್ ಫಿಶರ್ ವಿಮಾನ ಸಂಸ್ಥೆ ಮಾಲಕ ವಿಜಯ ಮಲ್ಯಗೆ ಸೇರಿದ ಐಷಾರಾಮಿ ವೈಯಕ್ತಿಕ ಜೆಟ್ ವಿಮಾನವನ್ನು ಪುನಃ  ಹರಾಜು ಹಾಕಿ ಬಾಕಿ ಹಣ ತುಂಬಿಸಿಕೊಳ್ಳಲು ಸೇವಾ ತೆರಿಗೆ ಇಲಾಖೆ ನಿರ್ಧರಿಸಿದೆ.

ಎಂ ಎಸ್ ಟಿ ಸಿ ವಿಮಾನಕ್ಕಾಗಿ ಇ-ಹರಾಜು ಹಾಕಲಿದೆ. ಈ ವಿಮಾನಕ್ಕೆ ಇಲಾಖೆಯು 152 ಕೋಟಿ ರೂ ನಿಗದಿಪಡಿಸಿದೆ. ಒಂದು ವೇಳೆ ಖರೀದಿದಾರರು ಇಷ್ಟೊಂದು ಮೊತ್ತಕ್ಕೆ ಇದನ್ನು ಖರೀಸಲು ಮುಂದಾಗದಿದ್ದರೆ, ಮೊತ್ತವನ್ನು ಮತ್ತೆ ಪರಿಶೀಲಿಸಲಾಗುವುದು. ಹರಾಜು ಪ್ರಕ್ರಿಯೆ ಇಂದು ಮತ್ತು ನಾಳೆ ನಡೆಯಲಿದೆ.

ಆದರೆ ವಿಮಾನದ ಬೆಲೆ ತೀರಾ ಕಡಿಮೆ ಮಾಡಲು ಇಲಾಖೆ ನಿರಾಕರಿಸಿದೆ. ಇಲಾಖೆಯು ಇದೀಗ ಮೂರನೇ ಬಾರಿಗೆ ಜೆಟ್ ವಿಮಾನದ ಇ-ಹರಾಜಿಗೆ ಪ್ರಯತ್ನ ಮುಂದುವರಿಸಿದೆ. ಹಿಂದಿನ ಎರಡು ಪ್ರಯತ್ನಗಳು ವಿಫಲಗೊಂಡಿದ್ದವು.