ವಿಜಯ್ ಇನ್ ಸಿಕ್ಸ್ ಪ್ಯಾಕ್

ದುನಿಯಾ ವಿಜಯ್ ಈಗ ಸಕತ್ ಕಸರತ್ತು ಮಾಡುತ್ತಿದ್ದಾನೆ. ಆತ ಕಳೆದ ಮೂರು ತಿಂಗಳಿಂದ ಜಿಮ್ಮಿನಲ್ಲಿ ಬೆವರಿಳಿಸುತ್ತಿದ್ದಾನೆ. ಅಷ್ಟೇ ಅಲ್ಲ ಆರು ಬಾರಿ ಒಲಂಪಿಕ್ ಚ್ಯಾಂಪಿಯನ್ ದಾವಣಗೆರೆ ಮೂಲದ ಮಂಜುನಾಥ್ ಅವರಿಂದ ತರಬೇತಿ ಪಡೆಯುತ್ತಿದ್ದಾನೆ. ಇದೆಲ್ಲ ಆತನ ಮುಂಬರುವ ಚಿತ್ರ `ಜಾನಿ ಜಾನಿ ಎಸ್ ಪಾಪಾ’ ಸಿನಿಮಾಗಾಗಿ.

ಚಿತ್ರದ ಫೈಟ್ ಸನ್ನಿವೇಶಕ್ಕಾಗಿ ವಿಜಯ್ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಾನೆ. ವಿಜಯ್‍ಗೆ ಮಾತ್ರವಲ್ಲ ಆತನ ಚಿತ್ರದ ನಿರ್ದೇಶಕರಿಗೂ ಅವನ ಬಾಡಿಯನ್ನು ತೆರೆಯ ಮೇಲೆ ಪ್ರದರ್ಶಿಸಲು ಬಹಳ ಇಷ್ಟ. ಅದಲ್ಲದೇ ವಿಜಯ್ ತನ್ನ ಪ್ರತೀ ಚಿತ್ರಕ್ಕೂ ಡಿಫ್ರೆಂಟ್ ಲುಕ್ಕಿನಲ್ಲಿ ಪ್ರೇಕ್ಷಕರ ಮುಂದೆ ಬರುವುದು ವಾಡಿಕೆ. ಈ ಸಿನಿಮಾಗೂ ವಿಭಿನ್ನ ಹೇರ್ ಸ್ಟೈಲ್ ಮತ್ತು ಕಾಸ್ಟ್ಯೂಮ್ಸ್ ಹೊಂದಲಿದ್ದಾನೆ ವಿಜಯ್.

ಈ ಸಿನಿಮಾ `ಜಾನಿ ಮೆರಾ ನಾಮ್’ ಚಿತ್ರದ ಮುಂದುವರಿದ ಭಾಗವಾಗಿದ್ದು ಇದಕ್ಕೆ ಪ್ರೀತಂ ಗುಬ್ಬಿ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ವಿಜಯ್ ಜೊತೆ ಸರಸವಾಡಲಿದ್ದಾಳೆ.

ವಿಜಯ್ ಈಗಾಗಲೇ `ಕನಕ’ ಚಿತ್ರದ ಶೂಟಿಂಗ್ ಮುಗಿಸಿದ್ದು ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸವೀಗ ನಡೆಯುತ್ತಿದೆ.