ನಗರಸಭೆಯ ಭವನ ನವೀಕರಣದಲ್ಲಿ ಭ್ರಷ್ಟಾಚಾರ ಆರೋಪ ವಿಜಿಲೆನ್ಸ್ ಕೇಸು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಸರಗೋಡು ನಗರಸಭೆಯ ಭವನ ನವೀಕರಣ ಯೋಜನೆ ಜಾರಿಗೊಳಿಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದಡಿ ಸಿಡಿಎಸ್ ಮಾಜಿ ಸದಸ್ಯ ಕಾರ್ಯದರ್ಶಿ ಹಾಗೂ ಭವನ ನವೀಕರಣ ಯೋಜನೆಯ ನಿರ್ವಹಣೆಯ ಹೊಣೆಗಾರಿಕೆ ಹೊಂದಿರುವ ಕೆ ಪಿ ರಾಜಗೋಪಾಲ್ ವಿರುದ್ಧ ಕಾಸರಗೋಡು ವಿಜಿಲೆನ್ಸ್ ಕೇಸು ದಾಖಲಿಸಿಕೊಂಡಿದೆ.
ಭ್ರಷ್ಟಾಚಾರ ತಡೆ ಕಾನೂನು, ನಕಲಿ ದಾಖಲು ಪತ್ರ ಸೃಷ್ಟಿ, ವಂಚನೆ ಇತ್ಯಾದಿ ಶಿಕ್ಷಾ ಸಂಹಿತೆ ಪ್ರಕಾರ ಕೇಸು ದಾಖಲಿಸಲಾಗಿದೆ ಎಂದು ವಿಜಿಲೆನ್ಸ್ ಡಿ ವೈ ಎಸ್ ಪಿ ರಘುರಾಮನ್ ತಿಳಿಸಿದ್ದಾರೆ.