ಬದಿಯಡ್ಕ ಗ್ರಾಮ ಪಂಚಾಯತಿಗೆ ವಿಜಿಲೆನ್ಸ್ ದಾಳಿ : ಒಬ್ಬ ಬಲೆಗೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬದಿಯಡ್ಕ ಗ್ರಾ ಪಂ ಕಚೇರಿಗೆ ವಿಜಿಲೆನ್ಸ್ ಅಧಿಕೃತರು ಮಿಂಚಿನ ದಾಳಿ ನಡೆಸಿ ಗ್ರಾ ಪಂ ಓವರ್ಸಿಯರರನ್ನು ಸೆರೆಹಿಡಿದ್ದಾರೆ.

ಗ್ರಾ ಪಂ ವ್ಯಾಪ್ತಿಯ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣ ಮತ್ತು ಪರವಾನಿಗೆ ಸಂಬಂಧಿಸಿ ಪಂಚಾಯತು ಓವರ್ಸಿಯರ್ ಪ್ರಶಾಂತ್ ಎ ಪಿ ಆರಂಭದಲ್ಲಿ 8 ಸಾವಿರ ರೂ ಲಂಚ ಅಪೇಕ್ಷಿಸಿದ್ದರು. ಬಳಿಕ ಅದು ಸಾಲದೆ ಮತ್ತೆ 8 ಸಾವಿರ ರೂ ಅಪೇಕ್ಷೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಆ ವ್ಯಕ್ತಿ ವಿಜಿಲೆನ್ಸ್ ಅಧಿಕೃತರಿಗೆ ಮಾಹಿತಿ ನೀಡಿದ್ದು. ಈ ಹಿನ್ನೆಲೆಯಲ್ಲಿ ಮಾರುವೇಶದಲ್ಲಿ ಬಂದ ವಿಜಿಲೆನ್ಸ್ ಅಧಿಕಾರಿಗಳೊಂದಿಗೆ ವ್ಯಕ್ತಿಯು ಹಣ ನೀಡುತ್ತಿದ್ದಾಗ ಅಧಿಕೃತರು ಕೈಯಾರೆ ಹಿಡಿದರು. ಪ್ರಶಾಂತ್ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಜಿಲನ್ಸ್ ಅಧಿಕೃತರು ಸುದ್ದಿಗಾರರಿಗೆ ತಿಳಿಸಿದರು.