ವಿಧಾನಸೌಧದಲ್ಲಿ ಪತ್ತೆಯಾದ 2.7 ಕೋಟಿ ರೂ ನಗದು ತನಿಖೆಗೆ ಕಾಂಗ್ರೆಸ್ ಆಗ್ರಹ

ಬೆಳಗಾವಿ : ಬಿಜೆಪಿ ನಾಯಕ ಯಡ್ಡಿಯೂರಪ್ಪಗೆ ಸೇರಿದ್ದೆಂದು ಭಾವಿಸಲಾಗಿರುವ ಇತ್ತೀಚೆಗೆ ವಿಧಾನ ಸೌಧಕ್ಕೆ ಸಾಗಿಸಲಾಗುತ್ತಿದ್ದ 2.7 ಕೋಟಿ ರೂ ನಗದು ಹಗರಣದ ಸೂಕ್ತ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದಾರೆ.

ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪರಿಷತ್ತಿನಲ್ಲಿ ಪ್ರತಿಭಟನೆಯೊಂದು ನಡೆಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯರಾದ ಉಗ್ರಪ್ಪ ಮತ್ತು ರೇವಣ್ಣ, ಹಣದೊಂದಿಗೆ ಅಧಿಕಾರಿಗಳಿಬ್ಬರು ಐಟಿ ಬಲೆಗೆ ಬಿದ್ದಿರುವ ಪ್ರಕರಣ ತನಿಖೆಯಾಗಲಿ ಎಂದು ಬೇಡಿಕೆ ಇಟ್ಟರು.

“ಕೆಲವು ಸಮಯದ ಹಿಂದೆ ವಿಧಾನ ಸೌಧದಲ್ಲಿ ಭಾರೀ ನಗದು ಜಪ್ತಿ ಮಾಡಲಾಗಿತ್ತು. ಈ ವಿಷಯದಲ್ಲಿ ವಿಪಕ್ಷಗಳು ಯಾಕೆ ಮೌನವಾಗಿವೆ ?” ಎಂದು ಉಗ್ರಪ್ಪ ಪ್ರಶ್ನಿಸಿದರು.

“ತನಿಖಾ ಕೆಲಸ ಅಧಿಕಾರದಲ್ಲಿರುವ ಕಾಂಗ್ರೆಸ್ ನಡೆಸಬೇಕು. ಇದಕ್ಕೆ ಸಂಬಂಧಿಸಿ ವಿಪಕ್ಷಗಳ ಮೇಲೆ ಗೂಬೆಕೂರಿಸುವುದು ಸರಿಯಲ್ಲ” ಎಂದು ಕಾಂಗ್ರೆಸ್ ಎಂಎಲ್‍ಸ್ಸಿಗಳ ಮಾತಿಂದ ಕುಪಿತಗೊಂಡ ಬಿಜೆಪಿ ಸದಸ್ಯರು ಹೇಳಿದರು.