ಯಡ್ಡಿ ಮತದಾರರಿಗೆ ಹಣ ಕೊಡುವ ಚಿತ್ರ ಬಹಿರಂಗ

ಬೆಂಗಳೂರು : ಎರಡು ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆ ನಡೆಯಲಿರುವ ಈ ಸಂದರ್ಭದಲ್ಲಿ ಪ್ರಚಾರ ವೇಳೆ ಬಿಜೆಪಿ ಮುಖಂಡ ಯಡಿಯೂರಪ್ಪ ರೈತ ಕುಟುಂಬವೊಂದಕ್ಕೆ ಲಕ್ಷ ರೂ ಹಣ ನೀಡುತ್ತಿರುವ ವೀಡಿಯೋ ಫೂಟೇಜ್ ಭಾರೀ ವಿವಾದ ಸೃಷ್ಟಿಸಿದೆ. “ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುವ ರೈತನೊಬ್ಬನ ಕುಟುಂಬಕ್ಕೆ ಪರಿಹಾರವಾಗಿ ಹಣ ನೀಡಿದ್ದೇನೆ. ಮತ ನೀಡುವಂತೆ ಯಾರಿಗೂ ಹಣ ನೀಡಿಲ್ಲ. ಈ ಸತ್ಯವನ್ನು ವೀಡಿಯೋ ಕ್ಲಿಪ್ಪಿಂಗೇ ಸಾಬೀತುಪಡಿಸುತ್ತದೆ” ಎಂದು ಯಡ್ಡಿಯೂರಪ್ಪ ಹೇಳಿಕೊಂಡಿದ್ದಾರೆ.