ಮಂಗಳೂರಲ್ಲಿ ಕಾಲೇಜು ಕನ್ಯೆ ಮೋಜಿನಾಟ

ಕರಾವಳಿ ಅಲೆ ಎಕ್ಸಕ್ಲ್ಯೂಸಿವ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭ ರಾತ್ರಿ ಮನೆಗೆ ಮರಳುತ್ತಿದ್ದ ಯುವತಿಯೊಬ್ಬಳ ಮೇಲೆ ಯುವಕರಿಬ್ಬರು ಸೇರಿ ದೌರ್ಜನ್ಯ ಎಸಗಿರುವ ಘಟನೆ ನಡೆದು ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಯಾಗಿರುವ ಬೆನ್ನಲ್ಲೇ ಮಂಗಳೂರಿನಲ್ಲಿ ಈ ರೀತಿಯದೇ ಆದ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನಗರದ ಹೊರವಲಯದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ಯುವಕರು ಇಲ್ಲಿ ತಮ್ಮದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಸಹಕಾರದಿಂದಲೇ ಆಕೆಯ ಮೇಲೆ ಲೈಂಗಿಕ ಕೃತ್ಯ ಎಸಗಿದ್ದಾರೆ. ನಗರದ ಹೊರವಲಯದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಒಬ್ಬ ವಿದ್ಯಾರ್ಥಿನಿಯೊಂದಿಗೆ ಮಜಾ ಉಡಾಯಿಸುವ ದೃಶ್ಯಾವಳಿಗಳು ಇದೀಗ ವೈರಲ್ ಆಗಿದ್ದು, ಅಂತರ್ಜಾಲ ತಾಣದಲ್ಲಿ ಹರಿದಾಡುತ್ತಿದೆ. ಹೊಸ ವರ್ಷಾಚರಣೆ ಸಂದರ್ಭ ಇವರೆಲ್ಲರೂ ಗುಡ್ಡೆಗೆ ಹೋಗಿ ಮೋಜು ಅನುಭವಿಸಿದ್ದಾರೆಂದು ತಿಳಿದುಬಂದಿದೆ.

ಈ ಕಾಲೇಜಿನ ಹದಿಹರೆಯದ ಯುವತಿ ಮೋಜಿನಾಟಕ್ಕೆ ಬಲಿಯಾಗಿ ತನ್ನ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಜೊತೆಗೆ ಅನ್ಯ ವಿದ್ಯಾರ್ಥಿಗಳನ್ನು ಕೂಡಾ ತಪ್ಪು ಹಾದಿ ಹಿಡಿಯುವಂತೆ ಮಾಡುತ್ತಿದ್ದಾಳೆ. ಕಾಲೇಜಿನ ಯೂನಿಫಾರಂ ಧರಿಸಿ, ಬೆನ್ನಿಗೆ ಬ್ಯಾಗನ್ನೂ ಕೂಡಾ ಹಾಕಿರುವ ಇನ್ನೂ ಸರಿಯಾಗಿ ಮೀಸೆ ಮೂಡದ ಈ ಪಡ್ಡೆ ಹೈಕಳು ಒಬ್ಬ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸುವ ಸುಮಾರು ಒಂದು ನಿಮಿಷ ಮೂವತೈದು ಸೆಕೆಂಡಿನ ದೃಶ್ಯ ಇದರಲ್ಲಿದೆ. ವಿದ್ಯಾರ್ಥಿಗಳು ಸೇರಿ ಒಬ್ಬಾಕೆಯನ್ನು ಚುಂಬಿಸುತ್ತಿರುವ ದೃಶ್ಯಾವಳಿಗಳು ಇದೀಗ  ಅಂತರ್ಜಾಲ ತಾಣದಲ್ಲಿ ಹರಿದಾಡುತ್ತಿದೆ.

ಕಾಲೇಜಿಗೆ ಹೋಗಿ ಭವಿಷ್ಯದ ಉಜ್ವಲ ಕನಸು ಕಾಣಬೇಕಾಗಿದ್ದ ವಿದ್ಯಾರ್ಥಿನಿಯರು ಇಂತಹ ಮೋಜಿನಾಟಕ್ಕೆ ಸಿಲುಕಿ ಹಾದಿ ತಪ್ಪುತ್ತಿದ್ದು, ಕಾಲೇಜಿನ ಆಡಳಿತ ಮಂಡಳಿ ಇಂತಹ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

ಇದೇ ವೇಳೆ ಮಂಗಳೂರಿನ ಕೆಲ ಪೊಲೀಸರಿಗೆ ಈ ವಿಚಾರ ಗೊತ್ತಿದ್ದು, ಅವರು ಈ ವಿಚಾರವನ್ನು ಬಹಿರಂಗಪಡಿಸದೇ ಗುಟ್ಟಾಗಿಟ್ಟಿದ್ದು, ಕಾಲೇಜಿನ ಆಡಳಿತ ಮಂಡಳಿ ಜೊತೆಗೆ ಗುಟ್ಟಾಗಿ ಮಾತನಾಡಿ ಡೀಲ್ ಕುದುರಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಕಾಲೇಜಿನ ಆಡಳಿತ ಮಂಡಳಿ ಕೂಡಾ ವಿದ್ಯಾರ್ಥಿಗಳ ಜೀವನ ಹಾಳಾಗಬಾರದು ಎಂದು ಈ ವಿಚಾರವನ್ನು ಬಹಿರಂಗ ಪಡಿಸಲು ಮುಂದಾಗಿರಲಿಲ್ಲ. ಈ ನಡುವೆ ಈ ವಿಡಿಯೋ ಸೋರಿಕೆಯಾಗಿದ್ದು, ಆಡಳಿತ ಮಂಡಳಿಯನ್ನು ಕಂಗೆಡುವಂತೆ ಮಾಡಿದೆ.