ಪಶುವೈದ್ಯರು, ಸಿಬ್ಬಂದಿ ಮುಷ್ಕರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಶಿರಸಿ :  ಉತ್ತರ ಕನ್ನಡ ಜಿಲ್ಲಾದ್ಯಂತ ಪಶು ವೈದ್ಯಕೀಯ ಇಲಾಖೆಯ ವೈದ್ಯರು, ನಿರೀಕ್ಷಕರು, ಸಹಾಯಕರು ಸೇವೆ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ.

ರಾಜ್ಯ ಸಚಿವರಿಗೆ ಈ ಹಿಂದೆಯೇ ಹಲವು ಸಲ ಈ ಬಗ್ಗೆ ಮನವಿ ನೀಡಲಾಗಿತ್ತು. ಹೋದ ತಿಂಗಳು ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಪತ್ರ ಸಲ್ಲಿಸಲಾಗಿತ್ತು. ಸಚಿವರು ಹೋದ ತಿಂಗಳೇ ಅಧಿಸೂಚನೆ ಹೊರಡಿಸುವ ಭರವಸೆ ನೀಡಿದ್ದರು. ಅದರಂತೆ ಸಾಮೂಹಿಕ ಲಸಿಕಾ ಕಾರ್ಯಕ್ರಮ ನಡೆಸಲಾಯಿತು. ಮೇ 15ರ ವರೆಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಂತಿಮ ಅಧಿಸೂಚನೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪಶುವೈದ್ಯ ಆಸ್ಪತ್ರೆ, ಪಶುಚಿಕಿತ್ಸಾಲಯ, ಪ್ರಾಥಮಿಕ ಕೇಂದ್ರಗಳ 300ರಷ್ಟು ಪಶುವೈದ್ಯರು, ಪಶುನಿರೀಕ್ಷಕರು, ಇತರ ಸಿಬ್ಬಂದಿಗಳು ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕೆ ಇಳಿದಿದ್ದಾರೆ.