`ವೇಮುಲಾ ಸಾವು ಆತ್ಮಹತ್ಯೆಯಲ್ಲ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹೈದರಾಬಾದ್ ವಿ ವಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿಗೀಡಾದ ಪ್ರಕರಣಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ದ ಕ ಇದರ ವತಿಯಿಂದ ರೋಹಿತ್ ಸಾವಿಗೆ ನ್ಯಾಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆ ದ ಕ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು ಮಾತನಾಡಿ, “ವೇಮುಲಾ ಸಾವು ಪ್ರಕರಣದಲ್ಲಿ ನ್ಯಾಯ ಮರೀಚಿಕೆಯಾಗಿದೆ. ವರ್ಷದ ಹಿಂದೆ ನಡೆದ ಘಟನೆಗೆ ನ್ಯಾಯ ಸಿಕ್ಕಿಲ್ಲ. ಇದು ಆತ್ಮಹತ್ಯೆಯಲ್ಲ. ಎಬಿವಿಪಿ ರೂಪದ ಜಾತಿಶಕ್ತಿಗಳು ಅತ್ಯಂತ ವ್ಯವಸ್ಥಿತವಾಗಿ ಅವರನ್ನು ಬಲಿತೆಗೆದುಕೊಂಡಿವೆ. ಅದನ್ನು ಆತ್ಮಹತ್ಯೆ ಎನ್ನುವ ಬದಲು ಕೊಲೆ ಅಂದರೆ ತಪ್ಪಲ್ಲ. ಮೋದಿ ಆಡಳಿತಕ್ಕೆ ಬಂದ ಬಳಿಕ ವಿ ವಿ ಕ್ಯಾಂಪಸ್ಸುಗಳಲ್ಲಿ ಕೋಮುವಾದಿಗಳ ಅಟ್ಟಹಾಸ ಹೆಚ್ಚಾಗಿದೆ” ಎಂದರು.