ವಾಹನಗಳಿಗೆ ಕಲ್ಲೆಸೆತ

ಹೆದ್ದಾರಿಯಲ್ಲಿ ಪೆÇಲೀಸ್ ಕಾವಲು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅಯೋಧ್ಯೆ ಘಟನಾವಳಿಯ ವಾರ್ಷಿಕ ದಿನವಾದ ಬುಧವಾರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೆÇಲೀಸರು ಕಟ್ಟೆಚ್ಚರ ವಹಿಸಿದ್ದರು. ಮಂಗಳವಾರ ರಾತ್ರಿ ವಿವಿಧೆಡೆಗಳಲ್ಲಿ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಿಸಿದ್ದು, ಇದರಿಂದ ವ್ಯಾಪಕ ನಷ್ಟ ಸಂಭವಿಸಿದೆ. ಘಟನೆ ಬಗ್ಗೆ ಪೆÇಲೀಸರು ಕೇಸು ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಕುಂಜತ್ತೂರಿನಲ್ಲಿ ವ್ಯಾಪಾರಿಗಳು ಯಾವುದೇ ಒತ್ತಡವಿಲ್ಲದೆ ಸ್ವಇಚ್ಚೆಯಿಂದ ಅಂಗಡಿಗಳನ್ನು ಮುಚ್ಚಿ ಹರತಾಳ ಆಚರಿಸಿದ್ದಾರೆ. ಆದರೆ ಈ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ಕಪ್ಪು ಧ್ವಜಗಳನ್ನು ಪೆÇಲೀಸರು ತೆರವುಗೊಳಿಸಿದ್ದಾರೆ.

ಮಂಗಳವಾರ ರಾತ್ರಿ 8 ಗಂಟೆ ವೇಳೆ ಬಾಕ್ರಬೈಲಿನಿಂದ ತಲಪಾಡಿ ಕಡೆಗೆ ತೆರಳುತ್ತಿದ್ದ ಆಂಜನೇಯ ಬಸ್ಸಿಗೆ ಕಡಂಬಾರ್ ಕಟ್ಟೆಯ ತಿರುವಿನಲ್ಲಿ ಕಲ್ಲೆಸೆತವುಂಟಾಗಿದೆ. ಹಿಂದಿನಿಂದ ಬಂ ತಂಡ ಕಲ್ಲೆಸೆದಿದ್ದು, ಬಸ್ ಒಂದು ಬದಿಗೆ ಕಲ್ಲು ತಾಗಿದೆ. ಕೂಡಲೇ ಬಸ್ ನಿಲ್ಲಿಸಿದರೂ ಕಿಡಿಗೇಡಿಗಳನ್ನು ಪತ್ತೆಹಚ್ಚಲಾಗಲಿಲ್ಲ. 8.35ರ ವೇಳೆ ಹೊಸಂಗಡಿಯಿಂದ ಆನೆಕಲ್ಲು ಕಡೆಗೆ ತೆರಳುವ ವಿಷ್ಣು ಬಸ್ಸಿಗೆ ಮೊರತ್ತಣೆ ಬಳಿಯ ಅರಿಬೈಲಿನಲ್ಲಿ ಕಲ್ಲೆಸೆತವುಂಟಾಗಿದೆ. ಇದರಿಂದ ಬಸ್ ಮುಂಭಾಗದ ಗಾಜು ನಾಶಗೊಂಡಿದೆ. ಇದರಿಂದ ಸುಮಾರು ಹತ್ತು ಸಾವಿರ ರೂ ನಷ್ಟವುಂಟಾಗಿರುವುದಾಗಿ ದೂರಲಾಗಿದೆ. ಘಟನೆ ಬಗ್ಗೆ ಬಸ್ ಮಾಲಕ ಚಂದ್ರಹಾಸ ಪೆಲಪ್ಪಾಡಿ ಮಂಜೇಶ್ವರ ಪೆÇಲೀಸರಿಗೆ ದೂರು ನೀಡಿದ್ದಾರೆ.

ರಾತ್ರಿ ವೇಳೆ ನಯಾಬಜಾರಿಲ್ಲಿ ಕರ್ನಾಟಕ ಸಾರಿಗೆ ಬಸ್ ಮೇಲೆ ಕಲ್ಲೆಸೆತವುಂಟಾಗಿದ್ದು ಮುಂಭಾಗದ ಗಾಜು ನಾಶಗೊಂಡಿದೆ. 9.30ರ ವೇಳೆ ಹಿದಾಯತ್ ಬಜಾರಲ್ಲಿ ಲಾರಿಗೆ ಕಲ್ಲೆಸೆತವುಂಟಾಗಿದೆ. ಈ ಎಲ್ಲಾ ಕೃತ್ಯಗಳನ್ನು ಬೈಕಿನಲ್ಲಿ ಬಂದ ಕಿಡಿಗೇಡಿಗಳು ನಡೆಸಿದ್ದಾರೆ. ಘಟನೆ ಬಗ್ಗೆ ಅರಿತೊಡನೆ ಪೆÇಲೀಸರು ಸ್ಥಳಕ್ಕೆ ತಲುಪಿ ಶೋಧ ನಡೆಸಿದರೂ ಕಿಡಿಗೇಡಿಗಳನ್ನು ಪತ್ತೆಹಚ್ಚಲಾಗಲಿಲ್ಲ. ಬುಧವಾರ ಬೆಳಿಗ್ಗೆ ನಾಯ್ಕಾಪಿನಲ್ಲಿ ಲಾರಿಗೆ ಕಲ್ಲೆಸೆತವುಂಟಾಗಿದೆ. ರಸ್ತೆ ಬದಿಯ ಕಾಡಿನಲ್ಲಿ ಅವಿತಿದ್ದ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿರುವುದಾಗಿ ದೂರಲಾಗಿದೆ. ವಾಹನಗಳ ಮೇಲೆ ಕಿಡಿಗೇಡಿಗಳ ಆಕ್ರಮಣದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಪೆÇಲೀಸರು ಬೆಂಗಾವಲು ಏರ್ಪಡಿಸಿದ್ದಾರೆ. ಉಪ್ಪಳ-ಬಾಯಾರು ರೂಟಿನಲ್ಲಿ ಬುಧವಾರ ಬಸ್ ಸಂಚಾರ ಮೊಟಕುಗೊಂಡಿತ್ತು. ಉಪ್ಪಳ-ಮೀಯಪದವು ರೂಟಿನಲ್ಲಿ ಬೆಳಿಗ್ಗೆ 11 ಗಂಟೆವರೆಗೆ ಯಾವುದೇ ಬಸ್ ಸಂಚರಿಸಿಲ್ಲವೆಂದು ನಾಗರಿಕರು ತಿಳಿಸಿದ್ದಾರೆ. ಇತರ ವಾಹನಗಳು ಯಾವುದೇ ಅಡಚಣೆಯಿಲ್ಲದೆ ಸಂಚರಿಸುತ್ತಿವೆ.

 

LEAVE A REPLY