ವಿವಿಧ ಬೇಡಿಕೆ ಆಗ್ರಹಿಸಿ ಹೆದ್ದಾರಿ ಸಮಿತಿ ವಾಹನ ಪ್ರಚಾರಣ ಜಾಥಾ

ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಪದಾಧಿಕಾರಿಗಳು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಎನ್ ಎಚ್ 17 ಆಕ್ಷನ್ ಕೌನ್ಸಿಲ್ ವತಿಯಿಂದ ಇಂದು ತಲಪಾಡಿಯಿಂದ ವಾಹನ ಪ್ರಚಾರಣ ಜಾಥಾ ನಡೆಯಲಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಇಂದು ತಲಪಾಡಿಯಿಂದ ಚಾಲನೆಗೊಳ್ಳಲಿರುವ ಪ್ರಚಾರಣ ಜಾಥಾವನ್ನು ಕೇರಳ ಹೈಕೋರ್ಟು ನ್ಯಾಯಾಧೀಶ ಉದ್ಘಾಟಿಸಲಿದ್ದಾರೆ. ಬಳಿಕ ರವಿವಾರ ಕಾಲಿಕಡವಿನಲ್ಲಿ ಈ ಜಾಥಾ ಸಮಾರೋಪಗೊಳ್ಳಲಿದೆ.

ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿ ಇಬ್ಬದಿ ರಸ್ತೆಯನ್ನು ಕೂಡಲೇ 4/6 ಪಥವಾಗಿ ರಸ್ತೆಯ ಇಕ್ಕೆಲಗಳಲ್ಲಿರುವ ಸರಕಾರಿ ಸ್ಥಳ 30 ಮೀಟರಿನಲ್ಲಿ ನಿರ್ಮಿಸಬೇಕು, ಸಂಚಾರ ಶುಲ್ಕ ಕೈಬಿಟ್ಟು ರಸ್ತೆ ನಿರ್ಮಾಣವನ್ನು ಸರಕಾರವೇ ಕೈಗೊಳ್ಳಬೇಕು ಮೊದಲಾದ ಬೇಡಿಕೆಯನ್ನು ಮುಂದಿಟ್ಟು ವಾಹನ ಪ್ರಚರಣ ನಡೆಯುತ್ತಿದೆ. ಹೆದ್ದಾರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣಗೊಳಿಸಲಾಗುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗಾಗಲೇ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.