ತರಕಾರಿ ಬೆಲೆ ಗಗನಕ್ಕೆ

ಮಂಗಳೂರು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗ್ರಾಹಕರ ಕೈ ಸುಡಲು ಆರಂಭಿಸಿದೆ. ಈ ಬಗ್ಗೆ ಕಾರಣ ಕೇಳಿದರೆ ಲಾರಿ ಬಂದ್, ಬೆಳೆಗಳ ಕೊರತೆ ಎನ್ನುವ ಉತ್ತರ ಸಿಗುತ್ತದೆ. ತರಕಾರಿಗ ದುಪ್ಪಟ್ಟು ಬೆಲೆಯಿಂದ ಗ್ರಾಹಕರಿಗೆ ಖರೀದಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ಸಂಬಳಕ್ಕೆ ದುಡಿಯುವ ಕಾರ್ಮಿಕರು ದುಪ್ಪಟ್ಟು ಬೆಲೆಯ ತರಕಾರಿ ಕೊಂಡುಕೊಳ್ಳುವುದು ಹೇಗೆ  ಆದ್ದರಿಂದ ಸಂಬಂಧಪಟ್ಟವರು ತರಕಾರಿ ಸೇರಿದಂತೆ ದಿನಬಳಕೆ ಅಗತ್ಯ ವಸ್ತುಗಳ ದರ ಬೆಲೆ ಇಳಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ

  • ಅನ್ಸಾರ್  ಪಾಂಡೇಶ್ವರ  ಮಂಗಳೂರು